ಆಲೆಟ್ಟಿ: ಕುಡೆಂಬಿ ವಿಷ್ಣುಮೂರ್ತಿ, ಪಡಿಂಞರಚಾಮುಂಡಿ, ಕೊರತ್ತಿ ದೈವಗಳ ಸಾನಿಧ್ಯದ ಪ್ರತಿಷ್ಠಾ ಕಲಶೋತ್ಸವದ ಆಮಂತ್ರಣ ಬಿಡುಗಡೆ

0

ಆಲೆಟ್ಟಿ ಗ್ರಾಮದ ಕುಡೆಂಬಿಯ ಶ್ರೀ ವಿಷ್ಣುಮೂರ್ತಿ, ಪಡಿಂಞರ ಚಾಮುಂಡಿ ,ಕೊರತ್ತಿ ದೈವಗಳ ಸಾನಿಧ್ಯದಲ್ಲಿ ಮೇ. 22 ಮತ್ತು 23 ರಂದು ನಾಗ ಮತ್ತು ಗುಳಿಗ ದೈವದ ಪುನ: ಪ್ರತಿಷ್ಠೆ ಹಾಗೂ ಶ್ರೀ ವಿಷ್ಣುಮೂರ್ತಿ, ಪಡಿಂಞರ ಚಾಮುಂಡಿ,ಕೊರತ್ತಿ,
ಕಾಲ್ಚನ್ ದೈವಗಳ ಪ್ರತಿಷ್ಠಾ ಕಲಶೋತ್ಸವವು ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆಯು ಎ.18 ರಂದು ನಡೆಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವ ಸಲಹೆಗಾರರಾದ
ಮುದ್ದಪ್ಪ ಗೌಡ ಕರ್ಲಪ್ಪಾಡಿ,
ಪುರುಷೋತ್ತಮ ಗೌಡ ಕೋಲ್ಚಾರು,ಹರೀಶ್ ಕೊಯಿಂಗಾಜೆ,ಬಾಲಕೃಷ್ಣ ನಾಯ್ಕಕುಡೆಂಬಿ,
ಸಮಿತಿಅಧ್ಯಕ್ಷ ಕೇಶವ ಕರ್ಲಪ್ಪಾಡಿ,ಪ್ರಧಾನ ಕಾರ್ಯದರ್ಶಿ ತೀರ್ಥಕುಮಾರ ಕದಿಕಡ್ಕ ಮತ್ತು ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.