ಕರಂಗಲ್ಲು ಶ್ರೀ ಉಳ್ಳಾಕುಲು ಮತ್ತು ಸಹ ಪರಿವಾರ ದೈವಗಳ ನೇಮೋತ್ಸವು ಎ. 16ಮತ್ತು17 ರಂದು ನಡೆಯಿತು.
















ಎ.9ರಂದು ಗೊನೆ ಮುಹೂರ್ತ ನೆರವೇರಿ, ಎ. 16ರಂದು ಸಂಜೆ ಉಗ್ರಾಣ ತುಂಬುವುದು ಹಾಗೂ ರಾತ್ರಿ ಭಂಡಾರ ತೆಗೆಯಲಾಯಿತು. ಎ.17 ರಂದು ಮುಂಜಾನೆ ಶ್ರೀ ಉಳ್ಳಾಕುಲು ದೈವದ ನೇಮ,ಪುರುಷ ದೈವದ ನೇಮೋತ್ಸವ ನೆರವೇರಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಮದ್ಯಾಹ್ನ ನಂತರ ಮಲೆಚಾಮುಂಡಿ ಕುಪ್ಪೆ ಪಂಜುರ್ಲಿ,ಅಜ್ಜಿದೈವಾದಿಗಳ ನೇಮೋತ್ಸವ ನೆರವೇರಿತು.
ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ ಸರ್ವಸದಸ್ಯರು,ಕರಂಗಲ್ಲು, ದೊಡ್ಡಕಜೆ ಹಾಗು ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.










