
ಸುಳ್ಯ ಸುಬ್ರಹ್ಮಣ್ಯ ರಸ್ತೆಯಿಂದ ಪ್ರವೇಶಿಸುವಲ್ಲಿ ಜಾಲ್ಸೂರು ಗ್ರಾಮಕ್ಕೊಳಪಡುವ ಸೋಣಂಗೇರಿ- ಜಿಬ್ಬಡ್ಕ ಕೊಯಿಂಗೋಡಿಮೂಲೆ ರಸ್ತೆಯು ತೀರಾ ಹದಗೆಟ್ಟಿದ್ದು, ಜಲ್ಲಿ ಬೋಲ್ಡ್ಡ್ರಸ್ ಎದ್ದು ಹೊಂಡಗುಂಡಿಗಳಾಗಿ ಸಂಚರಿಸಲು ಬಹಳ ಕಷ್ಟ ಪಡಬೇಕಾಗಿದೆ. ಕಳೆದ ವರ್ಷ ಮುಖ್ಯ ರಸ್ತೆ ಅಗಲೀಕರಣ ಸಮಯದಲ್ಲಿ ರಸ್ತೆ ತಿರುವಿನಲ್ಲಿ ಮಾತ್ರ ಜಲ್ಲಿ” ಡಾಮರ್ ಹಾಕಿ ಮಣ್ಣು ಹಾಕಿ ರೋಲರ್ ಓಡಿಸಿ ರಸ್ತೆ ಗಟ್ಟಿ ಮಾಡಿಕೊಟ್ಟಿದ್ದರು. ಇದೀಗ ಸಂಪೂರ್ಣ ಕಿತ್ತುಕೊಂಡು ಹೋಗಿದೆ.
















ಈ ಮಳೆಗಾಲ ಸಂಚಾರಕ್ಕೆ ಬಹಳ ಕಷ್ಟವಾಗುತ್ತದೆ. ಮೇಲಿನಿಂದ ನೀರು ಬರುವುದು ಹೊಂಡಗುಂಡಿ ಚಡಾವುನಲ್ಲಿ ವಾಹನ ಸಂಚರಿಸಲು ಪ್ರಯಾಸ ಪಡಬೇಕು. ನೀರಿನ ಪೈಪ್ ಲೈನ್ ಗೆ ಚರಂಡಿ ಕಡಿದು ಮುಚ್ಚಿದ್ದಾರೆ. ಹಾಗೆ ಕೆಳಗಡೆ ಕಾಡು ಬೆಳೆದು ರಸ್ತೆ ಬದಿಗಳಲ್ಲಿ ಚೆಂಡೆ ಮುಳ್ಳು ಉಪ್ಪಳಿಕೆ ಇತ್ಯಾದಿ ಬೆಳೆದು ಮಾರ್ಗ ಸರಿಯಾಗಿ ಕಾಣದಾಗಿದೆ. ಮೇಲಿಂದ ಕಿಡಿಗೇಡಿಗಳು ಕಸ ಎಸೆಯುತ್ತಿದ್ದಾರೆ. ಕಸದ ಮೂಟೆಗಳ ರಾಶಿ, ಬೀರು ಬಾಟ್ಲಿಗಳ ರಾಶಿ ಇವೆ.

ಪ್ರತಿ ವರ್ಷ ಪಂಚಾಯತ್‌ನವರು ಕಾಡು ಕಡಿಯುವುದಾಗಲಿ ಚರಂಡಿ ರಿಪೇರಿ ಮಾಡುವುದಾಗಲಿ ಮಾಡುತ್ತಿಲ್ಲ. ಹಣ ಇಲ್ಲ ಎನ್ನುತ್ತಿದ್ದಾರೆ. ಸೇತುವೆ ತಿರುವಿನಲ್ಲಿ ಕಸಗಳ ರಾಶಿ, ಕಳೆ ಪೊದೆ ಬೆಳೆದು ಚಂಡೆ ಮುಳ್ಳು ಬೆಳೆದು ಸೇತುವೆಗೆ ಚಾಚಿಕೊಂಡಿದೆ. ಈ ರಸ್ತೆಗೆ ಆದಷ್ಟು ಬೇಗ ಕಾಂಕ್ರಿಟೀಕರಣ ಮಾಡಬೇಕಾಗಿ ವಿನಂತಿಸುತ್ತಿದ್ದೇವೆ. ಮೇಲಿನ ಸಮಸ್ಯೆಯನ್ನು ಪರಿಹರಿಸುವುದಾಗಿ ಕಳಕಳಿಯಿಂದ ಬೇಡಿಕೊಳ್ಳುತ್ತಿದ್ದೇವೆ ಎಂದು ಎಂ. ವಸಂತ ರಾಮ್ ಶಾಸಕರಿಗೆ ಸಲ್ಲಿಸಿದ ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.










