ಪೈಚಾರ್ ‌: ಖುವ್ವತ್ತುಲ್ ಇಸ್ಲಾಂ ಮದ್ರಸಾ ಪ್ರಾರಂಭೊತ್ಸವ ಹಾಗೂ ಸನ್ಮಾನ ಕಾರ್ಯಕ್ರಮ

0

ಪೈಚಾರ್ : ಬದ್ರಿಯಾ ಜುಮಾ ಮಸೀದಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ
ಖುವ್ವತ್ತುಲ್ ಇಸ್ಲಾಂ ಮದರಸ ಪೈಚಾರ್ ಇದರ 2025 ನೇ ಸಾಲಿನ ಶೈಕ್ಷಣಿಕ ಮದರಸ ಪ್ರಾರಂಭೊತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಏ 19 ರಂದು ಪೈಚಾರ್ ಮದರಸದಲ್ಲಿ‌ ನಡೆಯಿತು.

ಪ್ರಾರಂಭೊತ್ಸವದ ಸಭಾ ಕಾರ್ಯಕ್ರಮವನ್ನು ಮಸೀದಿಯ ಖತೀಬರಾದ
ಶಮೀರ್ ಅಹ್ಮದ್ ನಹೀಮಿ ಯವರು ದುವಾ ನೆರವೇರಿಸಿ ಕುರಾನ್ ಪಠಣದೊಂದಿಗೆ ಉದ್ಘಾಟನೆ ನಿರ್ವಹಿಸಿದರು.

ಮದ್ರಸಕ್ಕೆ ನೂತನವಾಗಿ
ಕರ್ತವ್ಯಕ್ಕೆ ಬಂದಿರುವ ಸದರ್ ಮುಹಲ್ಲಿಂ
ಫೈಝಲ್ ಸಖಾಫಿ
ಕರ್ನೂರ್ ಇವರಿಗೆ ಮಸೀದಿಯ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಪಿ ರವರು ವಿದ್ಯಾರ್ಥಿಗಳ ಧಾಖಲೆ ಗಳನ್ನು ಹಸ್ತಾಂತರಿಸಿದರು.
ಬಳಿಕ ಸದರ್ ಉಸ್ತಾದರು. ಮಾತನಾಡಿ ನೂತನ ಶೈಕ್ಷಣಿಕ ಕಾರ್ಯ ಯೋಜನೆಗಳ
ಬಗ್ಗೆ ಹಾಗೂ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಕಳೆದ ಸಾಲಿನ ‌7 ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಸುಳ್ಯ ರೇಂಜಲ್ಲಿ ಪ್ರಥಮ ‌ಸ್ಧಾನ ‌ಪಡೆದ ಖದೀಜತ್ತ್ ಸಲ್ವಾ ಹನೂನ್ ಇವರನ್ನು ‌ಗೌರವಿಸಲಾಯಿತು.

ವೇದಿಕೆಯಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಹನೀಫ್ ಪಿಕೆ,ಮುಅಲ್ಲಿಂ ರಾದ ಹನೀಫ್ ಮದನಿ ಮಂಡೆಕೋಲು, ಜಝೀಲ್ ಸಖಾಫಿ,ಬಿಜೆಎಮ್ ಜೊತೆ ಕಾರ್ಯದರ್ಶಿ ಅಬೂಸಾಲಿ‌ ಕೆ ಪಿ.ಅಲ್ ಅಮೀನ್ ಯೂತ್ ಸೆಂಟರ್ ‌ಪೈಚಾರ್ ಇದರ ಅಧ್ಯಕ್ಷರಾದ ಸತ್ತಾರ್ ಪಿ ಎ., ಹಾಗೂ ಮದ್ರಸ ವಿದ್ಯಾರ್ಥಿಗಳು, ಪೋಷಕರು ಜಮಾಅತ್ ಸಮಿತಿಯ ಸದಸ್ಯರುಗಳು
ಸ್ಥಳೀಯರು ಭಾಗವಹಿಸಿದ್ದರು.

ಮದರಸ ಉಸ್ತುವಾರಿ ಮುಜೀಬ್ ಪೈಚಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.