ಪಂಜದ ಪೊಳೆಂಜದಲ್ಲಿ ನೂತನ ನಾಗನ ಕಟ್ಟೆ ಪ್ರತಿಷ್ಟಾಪನೆ

0

ಪಂಜದ ಪೊಳೆಂಜ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಸಾರ್ವಜನಿಕ ನಾಗನ ಕಟ್ಟೆ ವೇದಮೂರ್ತಿ ಪ್ರಸಾದ ಕೆದಿಲಾಯರ ಪೌರೋಹಿತ್ಯದಲ್ಲಿ ಪ್ರತಿಷ್ಟಾಪನೆಗೊಂಡಿತು. ಈ ಸಂಧರ್ಭದಲ್ಲಿ ಪಂಜ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ಪೈಂದೋಡಿ ಸುಬ್ರಾಯ ದೇವಸ್ಥಾನದ ಪ್ರಧಾನ ಅರ್ಚಕ ವಿಷ್ಣು ಪೈಂದೋಡಿ, ಸ್ಥಳೀಯ ರಾಜನ್ ದೈವ ಸ್ಥಾನದ ರಾಘವ ಕಾಣಿಕೆ, ಲಕ್ಷಣ ಬೊಳ್ಳಾಜೆ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ನಾಗನಕಟ್ಟೆಗೆ ಸ್ಥಳ ದಾನ ಮಾಡಿದ ಕೆಂಚಪ್ಪ ಗೌಡ ಮೂವಮೂಲೆ ಹಾಗೂ ಮನೆಯವರನ್ನು ಸನ್ಮಾನಿಸಲಾಯಿತು. ಪುಷ್ಪರಾಜ್ ಕೊಟ್ರoಜ ಕಾರ್ಯಕ್ರಮ ನಿರೂಪಿಸಿದರು.