ಉಬರಡ್ಕ : ಆನೆ ಧಾಳಿ – ಅಪಾರ ನಷ್ಟ

0

ಉಬರಡ್ಕ ಮಿತ್ತೂರು ಗ್ರಾಮದ ಪಟ್ರಕೋಡಿ ಎಂಬಲ್ಲಿ ಪಿ.ಎಸ್.ಗಂಗಾಧರ, ಪಿ. ಎಸ್. ಆನಂದ, ಪಿ. ಎಸ್. ಕೇಶವ, ಪಿ. ವಿ ಮೋಹನ ರವರ ತೋಟಗಳಿಗೆ ಆನೆಗಳ ಹಿಂಡು ಧಾಳಿ ಮಾಡಿ ಅಡಿಕೆ ಗಿಡಗಳು, ಅಪಾರ ಬಾಳೆಗಳನ್ನು ಹಾನಿ ಮಾಡಿದೆ. ತೋಟದ ಕೆರೆಯಲ್ಲಿ ನೀರು ಕುಡಿದು ಜೆಟ್ ಕುಟ್ಟಿಗಳನ್ನು ಹಾನಿ ಮಾಡಿ ಅಪಾರ ನಷ್ಟವನ್ನು ಉಂಟು ಮಾಡಿರುವುದಾಗಿ ತಿಳಿದು ಬಂದಿದೆ