ಆಲೆಟ್ಟಿ ಗ್ರಾಮದ ಕುಂಚಡ್ಕ ಮನೆತನದ ದಿ.ಜನಾರ್ದನ ಗೌಡ ಬಿಲ್ಲರಮಜಲು ರವರ ಧರ್ಮಪತ್ನಿಬಿಲ್ಲರಮಜಲು ಶ್ರೀಮತಿ ಪೂವಮ್ಮ ಕುಂಚಡ್ಕ ರವರು ಎ.7 ರಂದು ನಿಧನರಾಗಿದ್ದು ಮೃತರ ಉತ್ತರ ಕ್ರಿಯಾಧಿ ಸದ್ಗತಿ ಕಾರ್ಯಕ್ರಮ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿಯು ಎ.24 ರಂದು ಅಮರಶ್ರೀಭಾಗ್ ನಕೆ.ವಿ.ಜಿ.ಸಮುದಾಯ
ಭವನದಲ್ಲಿ ನಡೆಯಿತು.

ಕುಂಚಡ್ಕ ಮನೆತನದ ಹಿರಿಯರು,ನಿವೃತ್ತ ಮುಖ್ಯ ಶಿಕ್ಷಕರಾದ ಕೊರಗಪ್ಪ ಮಾಸ್ತರ್ ಕುಂಚಡ್ಕ ರವರು ಮೃತರ ಜೀವನಗಾಥೆಯ ಕುರಿತು ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು.
















ಈ ಸಂದರ್ಭದಲ್ಲಿ
ಮೃತರ ಪುತ್ರರಾದ ಪ್ರಗತಿಪರ ಕೃಷಿಕ ರಾಮಚಂದ್ರ ಗೌಡ ಕುಂಚಡ್ಕ, ಆಲೆಟ್ಟಿ ಸೊಸೈಟಿಯ ನಿವೃತ್ತ ಉದ್ಯೋಗಿ ಪೂವಯ್ಯ ಗೌಡ ಕುಂಚಡ್ಕ, ಪುತ್ರಿಯರಾದ ಶ್ರೀಮತಿ ಪುಷ್ಪಾವತಿ, ಶ್ರೀಮತಿ ಮೋಹನಾಂಗಿ, ಶ್ರೀಮತಿ ವೇದಾವತಿ, ಶಿಕ್ಷಕಿ ಶ್ರೀಮತಿ ರಾಧಮ್ಮ ಮತ್ತು ಸೊಸೆಯಂದಿರು,
ಅಳಿಯಂದಿರು, ಮೊಮ್ಮಕ್ಕಳು,ಮರಿ ಮಕ್ಕಳು ಹಾಗೂ ಕುಂಚಡ್ಕ ಕುಟುಂಬಸ್ಥರು, ಬಂಧು ವರ್ಗದವರು ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲಾ ಬಂಧು ಮಿತ್ರರು ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಸಮರ್ಪಿಸಿ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.










