ಜೋಡುಪಾಲ ಬಳಿ ಅಪಘಾತ : ಆಸ್ಪತ್ರೆಗೆ ದಾಖಲು

0

ಮಡಿಕೇರಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಗ್ಲಾಸ್ ತುಂಬಿದ ಟೆಂಪೋ ಜೋಡುಪಾಲ ಸೇತುವೆ ಬಳಿ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಕೆ ಎಸ್ ಆರ್ ಟಿ ಸಿ ಬಸ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಟೆಂಪೋ ಚಾಲಕ
ನಿಯಂತ್ರಣ ಕಳೆದು ಮುಂಭಾಗದಲ್ಲಿ ಸೇತುವೆ ಕಡೆ ನುಗ್ಗಿದೆ.

ಇದೇ ವೇಳೆ ಮೈಸೂರು ಕಡೆಗೆ ಹೋಗುತ್ತಿದ್ದ ಕಾರು ಎದುರಿನಿಂದ ಬಂದಿದ್ದು ಟೆಂಪೋ ಹಿಂಭಾಗ ಕಾರಿಗೆ ಡಿಕ್ಕಿ ಯಾಗಿ ಟೆಂಪೋದಲ್ಲಿದ್ದ ಗಾಜುಗಳು ಕಾರಿನ ಮೇಲೆ ಬಿದ್ದಿದೆ.
ಘಟನೆಯಿಂದ ಟೆಂಪೋದಲ್ಲಿದ್ದ ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ.

ಖಾಸಗಿ ವಾಹನದಲ್ಲಿ ಗಾಯಾಳುಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.