ಅಣ್ಣನ ಮರಣದ ಮೂರನೇ ದಿನ ತಮ್ಮ ನಿಧನ

0

ಸಾಮಾಜಿಕ ಧುರೀಣ ಕರೀಂ ಹಾಜಿ ಚೆನ್ನಾರ್ ವಿಧಿವಶ

ಪ್ರಸ್ತುತ ಸುಳ್ಯ ಗಾಂಧಿನಗರ ‌ಮಸೀದಿ ಬಳಿ‌ ನೆಲೆಸಿರುವ ಚೆನ್ನಾರ್ ನಿವಾಸಿ ಸಾಮಾಜಿಕ ಧಾರ್ಮಿಕ ಮುಖಂಡ ಅಬ್ದುಲ್‌ ಕರೀಂ ಹಾಜಿ ಚೆನ್ನಾರ್ ಎ.24 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಕರೀಂ ಹಾಜಿ ಅವರ ಸಹೋದರ ಪಯಾಜ್ ಹಾಜಿ ಚೆನ್ನಾರ್ ಮೂರು ದಿನಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.ಅವರ ನಿಧನ ವಾರ್ತೆ ತಿಳಿದು ಕರಿಂ ಹಾಜಿಯವರ ಆರೋಗ್ಯದಲ್ಲಿ ಏರುಪೇರು ಕಂಡು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದಿದಿದ್ದರು


ಪಯಾಜ್ ಹಾಜಿ ಅಂತ್ಯಸಂಸ್ಕಾರ ಇಂದು ಮೂರನೇ ದಿನ ಸೌದಿಅರೇಬಿಯಾದಲ್ಲಿ ನಡೆಯಿತು.


ಅವರ ಅಂತ್ಯಸಂಸ್ಕಾರದ ಬೆನ್ನಲ್ಲೇ ಕರೀಂ ಹಾಜಿಯವರು ನಿಧನರಾದರು.
ಪುತ್ತೂರು ಝೋನ್ ಮುಸ್ಲಿಂ ಜಮಾಯತ್ ಅಧ್ಯಕ್ಷರಾಗಿ, ದಾರುಲ್ ಇರ್ಶಾದ್ ಮಾಣಿ,ಮರ್ಕಝುಲ್ ಹುದಾ ಕುಂಬ್ರ,ದಾರುಲ್ ಹುದಾ ತಂಬಿನಮಕ್ಕಿ ಸೇರಿದಂತೆ ಅನೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆಸಲ್ಲಿಸಿದರು
ಮೆ.4 ರಂದು ಪುತ್ರಿಯ ವಿವಾಹ ಕಾರ್ಯಕ್ರಮ ನಡೆಯಲಿಕ್ಕಿದ್ದು ಅದರ ಸಿದ್ದತೆಯಲ್ಲಿದ್ದರು. ಅವರ ತವರೂರಾದ ಚೆನ್ನಾರ್ ನಲ್ಲಿ ನೂತನ ಮನೆ ನಿರ್ಮಿಸಿ ಅದರ ಗೃಹ ಪ್ರವೇಶ ಕಾರ್ಯಕ್ರಮವು ನಡೆಯಲಿಕ್ಕೆ ದಿನ ನಿಗದಿ ಮಾಡಿದರೆನ್ನಲಾಗಿದೆ.


ಮೃತರು ಪತ್ನಿ ,ಪುತ್ರಿ , ನಾಲ್ವರು ಪುತ್ರರು,ಹಾಗೂ ಮಾಪಳಡ್ಕ ಮಸೀದಿ ಮುದರಿಸ್ ಹಾಪೀಳ್ ಅಬ್ದುಲ್‌ ಸಲಾಂ ನಿಝಾಮಿ ಸೇರಿದಂತೆ ಮೂವರು ಸಹೋದರರನ್ನು ಅಗಲಿದ್ದಾರೆ