ಕೊಡಗು ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪ.ಸಹಕಾರ ಸಂಘದ ಆಶ್ರಯದಲ್ಲಿ ಕಾಶ್ಮೀರದ ಪಹಲ್ ಗಾಂವ್ ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಮೃತಪಟ್ಟ ಅಮಾಯಕರ ಆತ್ಮಕ್ಕೆ ಶಾಂತಿ ಕೋರಿ,ದೀಪ ಬೆಳಗಿ ,ಮೌನ ಪ್ರಾರ್ಥನೆ ಮಾಡುವ ಮೂಲಕ ಮುಖ್ಯ ಕಚೇರಿ ಸಂಪಾಜೆ ಮತ್ತು ಚೆಂಬು ಶಾಖೆಯ ಆವರಣದಲ್ಲಿ
ಭಯೋತ್ಪಾದಕರ ರಾಕ್ಷಸೀ ಕೃತ್ಯ ಖಂಡಿಸಿ ಪ್ರತಿಭಟನೆ ಮಾಡಲಾಯಿತು.
















ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಅನಂತ್ ಊರುಬೈಲು ಮತ್ತು ಬಿಜೆಪಿ ಧುರೀಣ ಸುಬ್ರಹ್ಮಣ್ಯ ಉಪಾದ್ಯಾಯರವರು ಮಾತನಾಡಿ “ಸಂಕಷ್ಟ ಸಂದರ್ಭದಲ್ಲಿ ಇಡೀ ಜನತೆ ಕೇಂದ್ರ ಸರಕಾರ ಕೈಗೊಳ್ಳಲಿರುವ ನಿರ್ದಾರದ ಜೊತೆ ಕೈಜೋಡಿಸುವ ಅಗತ್ಯತೆ ಮತ್ತು ಹಿಂದೂ ಸಮಾಜದ ಜಾಗೃತಿ ಬಗ್ಗೆ ಮನವರಿಕೆ ಮಾಡಿದರು.
ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಸಾಂಕೇತಿಕವಾಗಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರು ,ಸಿಬ್ಬಂದಿ ವರ್ಗ ,ಗ್ರಾಪಂ ಅದ್ಯಕ್ಷರು ,ಸದಸ್ಯರು ,ಸಂಘದ ಸದಸ್ಯರು ,ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.










