SSF ಸುಳ್ಯ ಡಿವಿಷನ್ ನೂತನ ಅಂಬ್ಯುಲೆನ್ಸ್ ಲೋಕಾರ್ಪಣೆ

0

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿಯ ನೂತನ ಅಂಬ್ಯುಲೆನ್ಸ್ ಲೋಕಾರ್ಪಣೆ ಸಮಾರಂಭ ಏಪ್ರಿಲ್ 24ರಂದು ಗಾಂಧಿನಗರದ ಗಾಂಧಿ ಪಾರ್ಕ್ ನಲ್ಲಿ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ರಿಯಾನ್ ಸಅದಿ ಅಧ್ಯಕ್ಷತೆಯಲ್ಲಿ ಸುಳ್ಯ ಸುನ್ನಿ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದ್ ಕುಂಞಿಕೋಯ ತಂಙಳ್ ಸಅದಿ ಉದ್ಘಾಟಿಸಿದರು‌.

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಮೌಲಾನಾ ಹಾಫಿಝ್ ಸುಫ್ಯಾನ್ ಸಖಾಫಿ ಸಂದೇಶ ಭಾಷಣಗೈದರು‌. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಸಬಾಹ್ ಹಿಮಮಿ ಸಖಾಫಿ ಬೀಜಕೊಚ್ಚಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಳ್ಯ ಎಂ.ಬಿ ಫೌಂಡೇಶನ್ ಸ್ಥಾಪಧ್ಯಕ್ಷರಾದ ಎಂ.ಬಿ ಸದಾಶಿವ ಸಂಘಟನೆಯ ಕಾರ್ಯವೈಖರಿಗಳನ್ನು ಶ್ಘಾಘಿಸಿ ಮಾತುಗಳನ್ನಾಡಿದರು.

ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಉಮರ್ ಕೆ.ಎಸ್, ಎಸ್.ವೈ.ಎಸ್ ಸುಳ್ಯ ಝೋನ್ ಅಧ್ಯಕ್ಷ ಲತೀಫ್ ಜೌಹರಿ ಆಶಂಸಾ ಮಾತುಗಳನ್ನಾಡಿದರು. ಹಾಜಿ ಅಬ್ದುರ್ರಹ್ಮಾನ್ ಸಂಕೇಶ್ ,ಹಾಜಿ ಅಬೂಬಕ್ಕರ್ ಬಿ.ಎಮ್.ಎ, ಹಾಜಿ ಅಬ್ದುಲ್ ಖಾದರ್ ಕಲ್ಲಪ್ಪಲ್ಲಿ ಅಬ್ದುಲ್ ಲತೀಫ್ ಅಡ್ಕಾರ್, ಅಬ್ದುಲ್ ರಶೀದ್ ಜಟ್ಟಿಪ್ಪಳ್ಳ, ಮಜೀದ್ ಝುಹ್ರಿ , ಲತೀಫ್ ಸಖಾಫಿ ಗೂನಡ್ಕ ಸಿದ್ದೀಕ್ ಹಿಮಮಿ ಪೈಂಬಚ್ಚಾಲ್ ಜಬ್ಬಾರ್ ಸಖಾಫಿ ಸಿರಾಜ್ ಹಿಮಮಿ ಫ಼ೈಝಲ್ ಝುಹ್ರಿ ಅಬೂಬಕ್ಕರ್ KA ರಿಯಾಝ್ ಕಟ್ಟೆಕ್ಕಾರ್ ,ಅಶ್ರಫ್ ಕರೀಮ್ ಕೆದ್ಕಾರ್,ಕಿಶೋರ್ ಭಟ್ ಮಾಂಡೋವಿ ಅಶ್ರಫ್ ಬಾಲೆಂಬಿ,ಹಾಜಿ ನಾಸಿರ್ ಕಟ್ಟೆಕ್ಕಾರ್ ಅಡ್ವಕೇಟ್ ಅಬೂಬಕ್ಕರ್ ಅಡ್ಕಾರ್ ಅಡ್ವಕೇಟ್ ಮೂಸ ಪೈಂಬಚ್ಚಾಲ್ ಹಾಗೂ ಇಬ್ರಾಹಿಮ್ KB ಉಪಸ್ಥಿತರಿದ್ದರು. ಸುಳ್ಯ ಡಿವಿಷನ್ ಆಂಬುಲನ್ಸ್ ನಿರ್ವಹಣಾ ಸಮಿತಿ ಸದಸ್ಯ ಕಬೀರ್ ಜಟ್ಟಿಪ್ಪಳ್ಳ ಸ್ವಾಗತಿಸಿ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಪ್ರ.ಕಾರ್ಯದರ್ಶಿ ಶಮೀರ್ ಡಿ.ಎಚ್ ವಂದಿಸಿದರು.