ಮಡಿದವರಿಗೆ ಮೊಂಬತ್ತಿ ಉರಿಸಿ ಶ್ರದ್ಧಾಂಜಲಿ
ದ.ಕ ಸಂಪಾಜೆ ಗ್ರಾಮ ಕಾಂಗ್ರೆಸ್ ವತಿಯಿಂದ ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರಗಾಮಿಗಳು ಏಕಾಏಕಿ ಧಾಳಿ ನಡೆಸಿ ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದ 27 ಮಂದಿಯನ್ನು ಕೊಂದ ಪೈಶಾಚಿಕ ಕೃತ್ಯವನ್ನು ಖಂಡಿಸಿ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಕಲ್ಲುಗುಂಡಿ ಯ ಮೇಲಿನ ಪೇಟೆ ಬಳಿ ಪ್ರತಿಭಟನಾ ಸಭೆಯನ್ನು ಏ 26 ರಂದು ನಡೆಸಲಾಯಿತು.
ಬಳಿಕ ಉಗ್ರರರ ದಾಳಿಯನ್ನು ಖಂಡಿಸಿ, ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸುವುದಕ್ಕಾಗಿ ಮೊಂಬತ್ತಿ ಉರಿಸಲಾಯಿತು.
ಬಳಿಕ ಮಾತನಾಡಿದ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಮಾತನಾಡಿ ” ಕಾಶ್ಮೀರದ ಪಹಲ್ ಗಾಂವ್ ನಲ್ಲಿ ಭಯೋತ್ಪಾದರು ಪ್ರವಾಸಿಗರ ಮತ್ತು ಸೈನಿಕರ ಮೇಲೆ ನಡೆಸಿದ ದಾಳಿಯಲ್ಲಿ ಅನೇಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಅದರಲ್ಲೂ ಭಾರತೀಯರ ಒಗ್ಗಟ್ಟನ್ನು ಕೆಡಿಸಲು ದುಷ್ಟ ಶಕ್ತಿಗಳು ಕೈ ಹಾಕಿದ್ದಾರೆ. ಪ್ರವಾಸಿಗರ ಮತ್ತು ಸೈನಿಕರ ಜೀವವನ್ನು ತೆಗೆದು ಪೈಶಾಚಿಕ ಹೀನಾಯ ಕೃತ್ಯಗಳ ಅಟ್ಟಹಾಸವನ್ನು ಮೆರೆದಿದ್ದಾರೆ. ಇನ್ನಾದರೂ ನಾವು ಎಲ್ಲರೂ ಒಟ್ಟಾಗಿ ಒಂದೇ ಎಂಬ ಬಾವೈಕ್ಯತೆಯಿಂದ ಸಾಗಿ ಭಾರತದಲ್ಲಿ ಅಲ್ಲದೆ ಇತರೆ ದೇಶಗಳಲ್ಲಿ ಭಯೋತ್ಪಾದನೆ ಮತ್ತು ಉಗ್ರಗಾಮಿಗಳ ಸಂಪೂರ್ಣವಾಗಿ ಕಿತ್ತೊಗೆದು ನಮ್ಮ ದೇಶ ಜನತೆಯ ಜೀವವನ್ನು ಸಂರಕ್ಷಣೆ ಮಾಡಬೇಕಿದೆ “ಎಂದರು.















ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ಸಂಘದ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಕೆ. ಪಿ.ಜಾನಿ ಮಾತನಾಡಿ ” ಉಗ್ರಗಾಮಿಗಳು ಹಿಂದೂ – ಮುಸ್ಲಿಂ, ಕ್ರೈಸ್ತ ಧರ್ಮದ ಒಗ್ಗಟ್ಟನ್ನು ಕೆಡಿಸಿ, ದೇಶದಲ್ಲಿ ಅಶಾಂತಿಯನ್ನು ಕೆಡಿಸುವ ಕಾರ್ಯ ಮಾಡುತ್ತಿದೆ . ಇಂದು ತಮ್ಮ ಕುಟುಂಬದ ನೆಮ್ಮದಿಯನ್ನು ಇಲ್ಲದಂತೆ ಮಾಡುತ್ತಿದ್ದಾರೆ. ಅದೆಷ್ಟೋ ಪಾಪದ ಜನರ ರಕ್ತವನ್ನು ತೆಗೆದು ಅಟ್ಟಹಾಸವನ್ನು ಮೆರೆಯುತ್ತಿದ್ದಾರೆ. ಇನ್ನಾದರೂ ನಾವು ಎಲ್ಲರೂ ಕೂಡಾ ದ್ವೇಷವನ್ನು ಮರೆತು ಪರಸ್ಪರ ಹೊಂದಾಣಿಕೆಯಿಂದ ಬದುಕಬೇಕಿದೆ. ಇನ್ನು ನಮ್ಮ ದೇಶದಲ್ಲಿ ಕೊಲೆ , ನೀಚ ಕೃತ್ಯಗಳನ್ನು, ಭಯೋತ್ಪಾದಕರನ್ನು ಸoಪೂರ್ಣ ಕಿತ್ತೆಸೆಯಬೇಕಿದೆ. ನಾವೆಲ್ಲರೂ ಒಟ್ಟಾಗಿ ಕೈ ಜೋಡಿಸಿ ನಮ್ಮ ದ ದೇಶವನ್ನು ಕಾಪಾಡಬೇಕಿದೆ “ಎಂದರು.
ದಾಳಿಯಲ್ಲಿ ಅನ್ಯಾಯವಾಗಿ ಮಡಿದವರಿಗಾಗಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಪಾಜೆ ವಲಯ ಕಾಂಗ್ರೆಸ್ ಪ್ರ
ಮುಖರಾದ
ಪ್ರಮುಖರಾದ ವಸಂತ ಪೆಲ್ತಡ್ಕ, ಸಬಾಸ್ಟಿಯನ್ ನೆಲ್ಲಿಕುಮೇರಿ , ಶೌವಾದ್ ಗೂನಡ್ಕ, ನಿತಿನ್ ಗೂನಡ್ಕ, ಜಾಯಿಡಿಸೋಜಾ, ಡೊಮಿನಿಕ್, ಫಿಲೋಮಿನಾ ಕ್ರಾಸ್ತಾ , ನಾಗಮತ್ತು ನೆಲ್ಲಿ ಕುಮೇರಿ, ಲೆನ್ಸಿ ಡಿಸೋಜಾ, ಎಚ್.ಎ.ಹಮೀದ್, ತಾಜ್ ಮಹಮ್ಮದ್ ಸಂಪಾಜೆ, ಬೆಂಜಮಿನ್ ಡಿಸೋಜಾ, ಸಂತೋಷ್ ಕ್ರಾಸ್ತಾ, ಸಿಲ್ವೆಸ್ಟರ್ ಡಿಸೋಜಾ , ಅಶ್ರಫ್ ಸೆಂಟ್ಯಾರು, ಬಿ.ಎಸ್ ಯಮುನಾ, ಲಿಸ್ಸಿ ಮೊನಾಲಿಸಾ, ಲಲನ, ಮಹಮ್ಮದ್ ಹನೀಫ್ . ಬಿ.ಎಸ್, ಯೂಸಫ್ ಕಲ್ಲುಗುಂಡಿ ಮೊದಲಾದವರು ಉಪಸ್ಥಿತರಿದ್ದರು.
ಕಲ್ಲುಗುಂಡಿ ಠಾಣಾ ಪೊಲೀಸ್ ಸಿಬ್ಬಂದಿ ರಾಜು ಎಸ್. ಜೆ .ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಪಾಜೆ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲೂಕಾಸ್ ಟಿ .ಐ ನಿರೂಪಿಸಿದರು.










