ಜೋಡುಪಾಲ : 2 ನೇ ಮೊಣ್ಣಂಗೇರಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪ್ರಪಾತಕ್ಕೆ ಪಲ್ಟಿ

0

ಜೋಡುಪಾಲ ೨ ನೇ ಮೊಣ್ಣಂಗೇರಿ ಬಳಿ ಕೊಕ್ಕೋ ಕೋಲಾ ಪಾನೀಯ ತರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸುಮಾರು ೫೦ ಅಡಿಯ ಪ್ರಪಾತಕ್ಕೆ ಉರುಳಿ ಬಿದ್ದ ಘಟನೆ ಏ. ೨೬ ರಂದು ರಾತ್ರಿ ಸಂಭವಿಸಿದೆ.

ಮಡಿಕೇರಿಯಿಂದ ಸರಕು ತುಂಬಿಕೊಂಡು ಮಂಗಳೂರು ಕಡೆ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ಹಳ್ಳಕ್ಕೆ ಬಿದ್ದಿದ್ದು ಘಟನೆಯಿಂದ ಲಾರಿ ಸಂಪೂರ್ಣ ಜಖಂಗೊಡಿದೆ.

ಅಪಘಾತದಲ್ಲಿ ಯಾರಿಗೂ ಗಾಯಗಳಾದ ಬಗ್ಗೆ ಇನ್ನು ತಿಳಿದು ಬಂದಿಲ್ಲ.