
ಎಣ್ಮೂರು ನಮ್ಮ ಗ್ರಾಮ ನಮ್ಮ ಹೆಮ್ಮೆ ಸಮಿತಿ ಆಶ್ರಯದಲ್ಲಿ ಇತಿಹಾಸ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳ ಎಣ್ಮೂರು ಕೋಟಿ ಚೆನ್ನಯರ ಗರಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಸ ಕಡ್ಡಿ ಪ್ಲಾಸ್ಟಿಕ್ ತೆರವುಗೊಳಿಸಲಾಯಿತು. ಸುದ್ದಿ ಸಂಪಾದಕ ಹರೀಶ್ ಬಂಟ್ವಾಳರವರ ಮಾಹಿತಿಯಿಂದ ಪ್ರೇರಣೆಗೊಂಡು ನಮ್ಮ ಇಚ್ಛೆಯಂತೆ ಸ್ವಚ್ಛತೆ ಮಾಡಿದೆವು ಎಂದು ಸಮಿತಿಯವರು ತಿಳಿಸಿದರು. ಈ ಸಂದರ್ಭದಲ್ಲಿ ಎನ್ ಜಿ ಲೋಕನಾಥ ರೈ ರಘುನಾಥ ರೈ ಕೆ ಎನ್ , ರಮೇಶ್ ಕೋಟೆ, ಮಾಯಿಲಪ್ಪ ಗೌಡ, ರಾಜೇಶ್ ರೈ ಗುತ್ತು, ಉಮೇಶ್ ಅಲೆಂಗಾರ, ಶ್ರೀಮತಿ ಶೀಲಾವತಿ ಗುತ್ತು ಇನ್ನಿತರು ಉಪಸ್ಥಿತರಿದ್ದರು.
















ವರದಿ: ಎ.ಎಸ್.ಎಸ್. ಸಾಲ್ಯಾನ್












