














ಮಂಡೆಕೋಲು ಗ್ರಾಮದ ಪೇರಾಲು ಶ್ರೀ ಬಜಪ್ಪಿಲ ಇರುವೆರ್ ಉಳ್ಳಾಕುಲು ಕ್ಷೇತ್ರದ ಜೀರ್ಣೋದ್ಧಾರ ನಡೆದು ೨೦೨೪ ಡಿಸೆಂಬರ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆದಿದೆ. ಜೀರ್ಣೋದ್ಧಾರದ ಮುಂದುವರಿದ ಭಾಗವಾಗಿ ಶ್ರೀ ಕ್ಷೇತ್ರದ ಶಾಶ್ವತ ಮೇಲ್ಚಾವಣಿಯನ್ನು ನಿರ್ಮಿಸುವ ಸಲುವಾಗಿ ಎ.೧೬ರಂದು ಗುದ್ದಲಿಪೂಜೆ ಯನ್ನು ನೆರವೇರಿಸಲಾಯಿತು.
ಕ್ಷೇತ್ರದ ಆಡಳಿತ ಮೊಕ್ತೇಸರರಾದ ಹೇಮಂತ ಕುಮಾರ್ ಗೌಡರಮನೆಯವರು ಊರವರು ಹಾಗೂ ಸಮಿತಿಗಳ ಪದಾಧಿಕಾರಿಗಳಿದ್ದು ಕ್ಷೇತ್ರದಲ್ಲಿ ಪ್ರಾರ್ಥನೆ ನೆರವೇರಿಸಿ, ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು, ಖಜಾಂಚಿ ತೀರ್ಥೇಶ್ ಬಲಂದೋಟಿ, ಆಡಳಿತ ಸಮಿತಿ ಕಾರ್ಯದರ್ಶಿ ಪ್ರವೀಣ್ ಬಾಳೆಕೋಡಿ, ಜಯರಾಮ ಗೌಡರಮನೆ, ದಿನೇಶ್ ರೈ ದರ್ಖಾಸು, ಕೌಶಿಕ್ ಗೌಡರಮನೆ, ಶ್ಯಾಮ್ ಪ್ರಸಾದ್ ಅಡ್ಡಂತಡ್ಕ, ದಾಮೋದರ ಮಿತ್ತಪೇರಾಲು, ದಿನೇಶ್ ಗಬಲಡ್ಕ, ರಂಜನ್ ಸೊರಂಜ, ಸುಧೀರ್ ಬಾಳೆಕೋಡಿ, ಚಂದ್ರಶೇಖರ ಪಂಜಿಮಲೆ, ಆನಂದ ಬದಿಕಾನ, ಮಂಜುನಾಥ ಬಾಳೆಕೋಡಿ, ರವೀಂದ್ರ ಕಾಟೂರು, ಗೋಪಾಲಕೃಷ್ಣ ಬೂಡು ಉಪಸ್ಥಿತರಿದ್ದರು.
ಶಾಶ್ವತ ಮೇಲ್ಚಾವಣಿಯ ಕಾಮಗಾರಿಯು ಸುಮಾರು ೩೦ ಲಕ್ಷ ವೆಚ್ಚದಲ್ಲಿ ನಡೆಯಲಿದ್ದು, ಮೇ ತಿಂಗಳ ಕೊನೆಯ ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ಜೀರ್ಣೋದ್ಧಾರ ಸಮಿತಿಯವರು ತಿಳಿಸಿದ್ದಾರೆ..










