ಸುಳ್ಯ ಸಿ.ಎ.ಬ್ಯಾಂಕ್ ನ ಪಕ್ಕದ ಕಾಲು ದಾರಿ ಎರಡೂವರೆ ಲಕ್ಷ ವೆಚ್ಚದಲ್ಲಿ ಬ್ಯಾಂಕ್ ವತಿಯಿಂದ ಅಭಿವೃದ್ಧಿ : ಉದ್ಘಾಟನೆ

0

ಜನರ ಬೇಡಿಕೆಯನ್ನು ಸಹಕಾರ ಸಂಘ ಈಡೇರಿಸಿರುವುದು ಶ್ಲಾಘನೀಯ : ಭಾಗೀರಥಿ ಮುರುಳ್ಯ

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಸುಳ್ಯದ ಪ್ರಧಾನ ಕಚೇರಿಯ ಬಲ‌ಬದಿಯಲ್ಲಿರುವ ಕಾಲು ದಾರಿಯನ್ನು ಸಿ.ಎ.ಬ್ಯಾಂಕ್ ವತಿಯಿಂದ ಸುಮಾರು ಎರಡೂವರೆ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದ್ದು, ರಸ್ತೆಯ ಉದ್ಘಾಟನೆ ಎ.29ರಂದು ಸಂಜೆ ನೆರವೇರಿತು

ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ರಿಬ್ಬನ್ ಕತ್ತರಿಸಿ ರಸ್ತೆ ಉದ್ಘಾಟಿಸಿದರೆ, ನ.ಪಂ. ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ ತೆಂಗಿನಕಾಯಿ ಒಡೆದರು.

ಬಳಿಕ ಮಾತನಾಡಿದ ಶಾಸಕರು, ಪ್ರತೀ ದಿನ ನೂರಾರು ಜನರು ನಡೆದಾಡುವ ಕಾಲು ದಾರಿ ಇದು. ಈ ರಸ್ತೆ ಅಭಿವೃದ್ಧಿ ಮಾಡಬೇಕೆಂದು ನನಗೆ ಮನವಿಗಳು ಬಂದಿತ್ತು. ಆದರೆ ಇಂದು ಸಿ.ಎ. ಬ್ಯಾಂಕ್ ನವರು ಆ ರಸ್ತೆಯನ್ನು ಎಷ್ಟು ಜಾಗವಿದೆಯೋ ಅಷ್ಟು ಅಗಲೀಕರಣಗೊಳಿಸಿ, ಇಂಟರ್ ಲಾಕ್ ಅಳವಡಿಸಿದ್ದಾರೆ. ಜನರ ಬೇಡಿಕೆಯನ್ನು ಅರಿತು ಸ್ಪಂದಿಸಿರುವ ಸಿ.ಎ.ಬ್ಯಾಂಕ್ ನವರ ಕಾರ್ಯ ಶ್ಲಾಘನೀಯ ಎಂದು‌ ಹೇಳಿದರು.

ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ನ.ಪಂ. ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ ಹಾಗೂ ಹಿರಿಯರಾದ ಪಿ.ಕೆ. ಉಮೇಶ್ ಶುಭಹಾರೈಸಿದರು.

ನಗರ ಪಂಚಾಯತ್
ಉಪಾಧ್ಯಕ್ಷ ಬುದ್ದ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಸದಸ್ಯರುಗಳಾದ ಸರೋಜಿನಿ ಪೆಲ್ತಡ್ಕ, ಶೀಲಾ ಕುರುಂಜಿ, ಸುಧಾಕರ ಕುರುಂಜಿಭಾಗ್, ಸಿ.ಎ. ಬ್ಯಾಂಕ್ ನಿರ್ದೇಶಕರುಗಳಾದ ಕೇಶವ ಮಾಸ್ತರ್ ಹೊಸಗದ್ದೆ, ಚಂದ್ರಶೇಖರ ದೊಡ್ಡೇರಿ, ಹೇಮಂತ್ ಕುಮಾರ್ ಕಂದಡ್ಕ, ಶಿವರಾಮ ಕೇರ್ಪಳ, ಹರಿಣಾಕ್ಷಿ ಬೇಲ್ಯ, ನವ್ಯಾ ಚಂದ್ರಶೇಖರ ಅಡ್ಪಂಗಾಯ, ಮಾಜಿ ಅಧ್ಯಕ್ಷರುಗಳಾದ ಹರೀಶ್ ಬೂಡುಪನ್ನೆ ಹಾಗೂ ಸುಬೋಧ ಶೆಟ್ಟಿ ಮೇನಾಲ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ ಎಸ್.ಆರ್.ಸೂರಯ್ಯ, ಸುನಿಲ್ ಕೇರ್ಪಳ, ಸೋಮನಾಥ ಪೂಜಾರಿ, ದೊಡ್ಡಣ್ಣ ಮಾಸ್ತರ್ ಬರೆಮೇಲು, ಜಿನ್ನಪ್ಪ ಪೂಜಾರಿ, ಅಶೋಕ್ ಅಡ್ಕಾರ್, ಶಂಕರಲಿಂಗಂ, ನಾರಾಯಣ ಶಾಂತಿನಗರ ಮೊದಲಾದವರಿದ್ದರು.

ಸಿ.ಎ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸೂರ್ತಿಲ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪಾಧ್ಯಕ್ಷ ಚಂದ್ರಶೇಖರ ಸೋಣಂಗೇರಿ ವಂದಿಸಿದರು.