














ವಿನೋಬನಗರದ ವಿವೇಕಾನಂದ ಶಾಲಾ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಕಾರಿಂಜರವರು ಬರೆದಿರುವ ಚುಟುಕು ಕವನ ಸಂಕಲನ ‘ಭಿನ್ನರಾಗ” ಪ್ರತಿಯನ್ನು ಕಳಂಜ ಗ್ರಾ.ಪಂ. ಗ್ರಂಥಾಲಯಕ್ಕೆ ಹಸ್ತಾಂತರಿಸಲಾಯಿತು.
ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು ಕವನದ ಪ್ರತಿಯನ್ನು ಗ್ರಂಥ ಪಾಲಕರಾದ ಪುಷ್ಪಾವತಿಯವರಿಗೆ ನೀಡಿದರು. ಪಂಚಾಯತ್ ಕಾರ್ಯದರ್ಶಿ ಪದ್ಮಯ್ಯ, ಸಿಬ್ಬಂದಿಗಳಾದ ಗಿರಿಧರ ಕಳಂಜ, ಪುರುಷೋತ್ತಮ ಉಪಸ್ಥಿತರಿದ್ದರು.










