
ಅರಂತೋಡು ಬಿಳಿಯಾರು ಪೆಟ್ರೋಲ್ ಪಂಪ್ ಬಳಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಪ್ರಯಾಣಿಕರಿಗೆ ಗಾಯವಾದ ಘಟನೆ ಮೇ.1 ರಂದು ನಡೆದಿದೆ.
















ಸುಳ್ಯ ಭಾಗಕ್ಕೆ ಹೋಗುವ ಸ್ವಿಫ್ಟ್ ಕಾರು ಹಾಗೂ ಮಡಿಕೇರಿಗೆ ತೆರಳುವ
ಆಲ್ಟೋ ಕಾರುಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದೆ.ಪರಿಣಾಮವಾಗಿ ಪ್ರಯಾಣಿಕರಿಗೆ ಗಾಯವಾಗಿದ್ದು ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ. ಎರಡೂ ಕಾರಿನ ಪ್ರಯಾಣಿಕರು ಕೇರಳದವರು ಎಂದು ತಿಳಿದು ಬಂದಿದೆ. ಕಾರುಗಳೆರಡು ಕೂಡ ಜಖಂ ಗೊಂಡಿದೆ.










