ಘಟನೆ ಖಂಡಿಸಿ ಸಂಜೆ 6 ಗಂಟೆವರೆಗೆ ಬಂದ್ ಗೆ ಕರೆ

ಎರಡು ವರ್ಷಗಳ ಹಿಂದೆ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಮಂಗಳೂರಿನಲ್ಲಿ ಫಾಝಿಲ್ ಎಂಬ ಯುವಕನನ್ನು ಕೊಚ್ಚಿ ಕೊಲೆ ಮಾಡಿದ ಪ್ರಕರಣದ ಮುಖ್ಯ ಆರೋಪಿ ಸುಹಾಸ್ ಶೆಟ್ಟಿ ಎಂಬ ಯುವಕನನ್ನು ನಿನ್ನೆ ಸಂಜೆ ದುಷ್ಕರ್ಮಿಗಳು ಬಜ್ಪೆ ಸಮೀಪ ಕೊಚ್ಚಿ ಕೊಲೆ ಮಾಡಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರಾಗಿರುವ ಸುಹಾಸ್ ಶೆಟ್ಟಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ವಿಶ್ವ ಹಿಂದೂ ಪರಿಷತ್ ಇಂದು ಜಿಲ್ಲಾದ್ಯಂತ ಬಂದ್ ಗೆ ಕರೆ ನೀಡಿದ್ದು ಪರಿಣಾಮವಾಗಿ ಸುಳ್ಯ ಪೇಟೆ ಕೂಡ ಬಹುತೇಕ ಸಂಪೂರ್ಣ ಬಂದ್ ಆಗಿದೆ.

















ಬಿ.ಜೆ.ಪಿ. ಮತ್ತು ವಿ.ಹಿಂ.ಪ. ಕಾರ್ಯಕರ್ತರು ವೆಂಕಟ್ ವಳಲಂಬೆ, ವಿಶ್ವಹಿಂದೂ ಪರಿಷತ್ ನಾಯಕ ಸೋಮಶೇಖರ ಪೈಕ, ಹರೀಶ್ ಕಂಜಿಪಿಲಿ ಮತ್ತಿತರರ ಮುಂದಾಳತ್ವದಲ್ಲಿ ಗಾಂಧಿನಗರದಿಂದ ಶ್ರೀರಾಮಪೇಟೆಯ ವರೆಗೆ ಪಾದಯಾತ್ರೆ ನಡೆಸಿ ಬಂದ್ ಮಾಡಿರದ ಅಂಗಡಿಗಳವರನ್ನು ವಿನಂತಿಸಿ ಬಂದ್ ಮಾಡಿಸಿದರೆಂದು ತಿಳಿದುಬಂದಿದೆ.










