ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಪ್ರಾ.ಆರೋಗ್ಯ ಸುರಕ್ಷಾಧಿಕಾರಿಯಾಗಿ ಚಂದ್ರಾವತಿ ಕೆ ಏ 30 ರಂದು ಸೇವಾ ನಿವೃತ್ತಿ ಹೊಂದಿದರು. ಇವರು ಸುಧೀರ್ಘ 36 ವರ್ಷ 10 ತಿಂಗಳು ಸೇವೆ ಪೂರೈಸಿದ್ದಾರೆ.















1965ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಕಿ.ಪ್ರಾಶಾಲೆ ಕೊಡಿಯಾಲಬೈಲಿನಲ್ಲಿ ಪಡೆದು ಪ್ರೌಢ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಪದವಿಪೂರ್ವ ಕಾಲೇಜು ಸುಳ್ಯ ಇಲ್ಲಿ ಪೂರೈಸಿದ್ದಾರೆ. ನಂತರ 1986-87ರಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ತರಬೇತಿಯನ್ನು ವೆನ್ ಲಾಕ್ ಆಸ್ಪತ್ರೆ ಮಂಗಳೂರಿನಲ್ಲಿ ಪಡೆದರು, 1988 ರಲ್ಲಿ ತಾಲೂಕು ಆಸತ್ರೆ ಸುಳ್ಯದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಖಾಯಂ ನೇಮಕಾತಿಗೊಂಡು ಸರಕಾರಿ ಸೇವೆಯನ್ನು ಆರಂಭಿಸಿದರು. ಉಪಕೇಂದ್ರ ಗೋಂಟಡ್ಕದಲ್ಲಿ ಸುದೀರ್ಘ 29 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ ಪಂಜ ಪ್ರಾ.ಆ.ಕೇಂದ್ರದಲ್ಲಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಸೇವೆಯನ್ನು ಸಲ್ಲಿಸಿದರು. 2009ರಲ್ಲಿ ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ತರಬೇತಿಯನ್ನು ಪಡೆದು .2021 ರಲ್ಲಿ ಹಿರಿಯ ಪ್ರಾ.ಆರೋಗ್ಯ ಸುರಕ್ಷಾಧಿಕಾರಿಯಾಗಿ ಪದೋನ್ನತಿ ಹೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರಿಗೆ ವರ್ಗಾವಣೆಗೊಂಡು ಸೇವೆಯನ್ನು ನೀಡಿದ್ದಾರೆ.
ಸುಳ್ಯ ಕಸಬಾ ಕೊಡಿಯಾಲಬೈಲಿನ ಸುಂದರ ನಾಯಕ್ ಮತ್ತು ಶ್ರೀಮತಿ ರೇಣುಕಮ್ಮರವರ ನಾಲ್ಕು ಸಹೋದರರು , ಒಬ್ಬಳು ಸಹೋದರಿಯರೊಂದಿಗೆ ಇವರು ಆರನೆಯವರಾಗಿದ್ದಾರೆ. ಇವರ ಪತಿ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ, ಹಾಗೂ ಮಹಾಲಕ್ಷ್ಮಿ ಇಲೆಕ್ಟಿಕಲ್ಸ್ ಸುಳ್ಯ ಇದರ ಮಾಲಕ
ಸಂಜೀವ ನಾಯಕ್. ಪ್ರಸ್ತುತ ಚಂದ್ರಾವತಿ ಅವರು ಜಾಲ್ಸೂರು ಗ್ತಾಮದ ಕುಕ್ಕಂದೂರು ನಿವಾಸಿಯಾಗಿದ್ದಾರೆ. ಮಗ ಸಂದೀಪ್ ಕೆ ಡಿಪ್ಲೋಮ ಇನ್ ಇಲೆಕ್ಟಿಕಲ್ ಆಂಡ್ ಇಲೆಕ್ಟ್ರಾನಿಕ್ಸ್ ವ್ಯಾಸಂಗ ಮಾಡಿದ್ದು ಪ್ರಸ್ತುತ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ ಸೊಸೆ ಸುಷ್ಮಾ ಮತ್ತು ಮೊಮ್ಮಗ ಮಾl ಸನ್ವಿತ್ ನಾಯಕ್. ಪುತ್ರಿ ಸೌಜನ್ಯ ಕೆ ., ಬಿ.ಇ ಎಂ.ಟೆಕ್ ಪದವಿಯನ್ನು ಪಡೆದು ವಿದೇಶಿ ಕಂಪನಿಯೊಂದರಲ್ಲಿ ಕಾವ್ಯನಿರ್ವಹಿಸುತ್ತಿದ್ದಾರೆ. ಅಳಿಯ ಸಂದೀಪ್ ಪಿ.ಆರ್ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.










