2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯದ ಶ್ರೀ ಶಾರದಾ ಪ್ರೌಢಶಾಲೆಗೆ ಶೇಕಡ 100 ಫಲಿತಾಂಶ ದಾಖಲಾಗಿದೆ.
ಪರೀಕ್ಷೆಗೆ 34 ವಿದ್ಯಾರ್ಥಿನಿಯರು ಹಾಜರಾಗಿ ಎಲ್ಲರೂ ತೇರ್ಗಡೆ ಹೊಂದಿದ್ದು, ವಿಶಿಷ್ಟ ಶ್ರೇಣಿ – ೦3 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿ -21 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿ -೦7ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.















ವಿಶಿಷ್ಟ ಶ್ರೇಣಿಯಲ್ಲಿ ಹವ್ಯಶ್ರೀ.ಕೆ 606 ಅಂಕಗಳಿಸಿದ್ದು ಇವರು ಕೊಡ್ತಿಲು ಮನೆ ಐವರ್ನಾಡು ದೇವಪ್ಪ ಕೆ ಹಾಗೂ ಹೇಮಾವತಿ ಕೆ ದಂಪತಿ ಪುತ್ರಿಯಾಗಿದ್ದಾರೆ.
ಫಾತಿಮತ್ ಆಶಿಕ ೫೪೧ ಅಂಕಗಳಿಸಿದ್ದು, ಅಡ್ಕಾರಿನ ಮೊಹಮ್ಮದ್ ಅಶ್ರಫ್ ಜಿ ಹಾಗೂ ಸಾಜಿದ ದಂಪತಿಗಳ ಮಗಳಾಗಿದ್ದಾರೆ.
ಗ್ರೀಷ್ಮ ಎಂ ಜಿ 536 ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಇವರು ಪೆರಾಜೆಯ ಕುಂದಲ್ಪಾಡಿ ಮನೆಯ ಗಿರೀಶ್ ಎಂ ಸಿ ಹಾಗೂ ಸವಿತಾ ಎನ್ ಜಿ ಇವರ ಪುತ್ರಿಯಾಗಿದ್ದಾರೆ.










