














ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಗೊಂಡಿದ್ದು, ಯೇನೆಕಲ್ಲು ಸರಕಾರಿ ಪ್ರೌಢಶಾಲೆ ಶೇ. 100 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 23 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 4 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಬಳ್ಪದ ಕಮಲಾಕ್ಷ ಮತ್ತು ಚಿತ್ರಲತಾ ದಂಪತಿಯ ಪುತ್ರಿ ರಕ್ಷಾ 591, ಬೂದಿಪಳ್ಳ ಚಂದ್ರಶೇಖರ ಮತ್ತು ಕೆ. ಲೀಲಾವತಿ ದಂಪತಿಯ ಪುತ್ರಿ ಈಕ್ಷ 569, ಬಳ್ಪ ಮೋಹನ ಮತ್ತು ಸುನಂದ ದಂಪತಿಯ ಪುತ್ರಿ ಸಂಜನ 559, ಅಂಬೆಕಲ್ಲು ಶಶಿಧರ ಮತ್ತು ಲೋಕಶ್ರೀ ದಂಪತಿಯ ಪುತ್ರ ನವನೀತ್ ಎ.ಎಸ್ 539 ಮತ್ತು ನೆಕ್ರಾಜೆ ಮನೆ ನಾಗೇಶ್ ನೆಕ್ರಾಜೆ ಮತ್ತು ಸುಲೋಚನ ದಂಪತಿಯ ಪುತ್ರಿ ಸ್ಪಂದನ ಯನ್ 534 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.










