ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಹನ್ಸಿಕಾರಿಗೆ ಶಾಸಕರಿಂದ ಸನ್ಮಾನ

0

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಹನ್ಸಿಕಾರವರನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಹನ್ಸಿಕಾರವರ ಮನೆಯಲ್ಲಿ ಮೆ. ೩ರಂದು ಸನ್ಮಾನಿಸಿದರು. ಬಳಿಕ ಸಿಹಿತಿಂಡಿ ತಿನ್ನಿಸಿ ಸಂಭ್ರಮಾಚರಣೆ ನಡೆಸಿದರು.

ಈ ಸಂದರ್ಭದಲ್ಲಿ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಉದಯ ರೈ ಮಾದೋಡಿ, ಬೆಳಂದೂರು ಗ್ರಾ.ಪಂ.ಸದಸ್ಯರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ಮೋಹನ ಅಗಳಿ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಸ್ಥೆಯ ಟ್ರಸ್ಟಿಗಳಾದ ವೃಂದಾ ಜೆ.ರೈ ಮಾದೋಡಿ, ದೇವಿಕಿರಣ್ ರೈ ಮಾದೋಡಿ, ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಮುಖ್ಯಗುರುಗಳಾದ ನಾರಾಯಣ ಭಟ್, ವಿನಯ.ವಿ.ಶೆಟ್ಟಿ, ಸಹ ಆಡಳಿತಾಧಿಕಾರಿ ಹೇಮಾನಾಗೇಶ್ ರೈ ಮಾಳ, ಶಿಕ್ಷಕರಾದ ಕವಿತಾ ವಿ.ರೈ, ಚಿತ್ರಕಲಾ ಎಂ, ಶುಭಶ್ರೀ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಿರ್ಮಲ ಕೇಶವ ಗೌಡ ಅಮೈ, ಚಂದ್ರಶೇಖರ ಆಚಾರ್ಯ ಬನಾರಿ, ಪದ್ಮನಾಭ ಬೆಳಂದೂರು, ಹನ್ಸಿಕಾ ತಂದೆ ವಾಸಪ್ಪ ಶೆಟ್ಟಿಗಾರ ಬನಾರಿ, ತಾಯಿ ವೈಶಾಲಿ ಬನಾರಿ ಮತ್ತಿತರರು ಉಪಸ್ಥಿತರಿದ್ದರು. ಲೋಕೇಶ್ ಬಿ.ಎನ್ ಬರೆಪ್ಪಾಡಿ ಸ್ವಾಗತಿಸಿ, ವಂದಿಸಿದರು.