ರಾಮಣ್ಣ ನಾಯ್ಕ್ ಕಣಿಪ್ಪಿಲರವರಿಗೆ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ

0

ಅಮರಪಡ್ನೂರು ಗ್ರಾಮದ ಕಣಿಪ್ಪಿಲ ಚೊಕ್ಕಾಡಿ ರಾಮಣ್ಣ ನಾಯ್ಕ್ ರವರು ಅಲ್ಪ ಕಾಲದ ಅಸೌಖ್ಯದಿಂದ ಎ‌.22 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಮೇ.04 ರಂದು ಕಣಿಪ್ಪಿಲ ಮನೆಯಲ್ಲಿ ನಡೆಯಿತು.


ಕುಶಾಲಪ್ಪ ನಾಯ್ಕ ಕಣಿಪ್ಪಿಲಕಜೆ ಮತ್ತು ದಿ. ರಾಮಣ್ಣ ನಾಯ್ಕ್ ರವರ ಪುತ್ರಿ ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗೀತಾ ಮೋಹನ ಹೊಸೊಳಿಕೆಯವರು ದಿ.ನಾರಾಯಣ ನಾಯ್ಕ್ ರವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.


ಆಗಮಿಸಿದ ನೂರಾರು ಜನರು ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪತ್ನಿ ಶ್ರೀಮತಿ ಲಲಿತ,ಪುತ್ರ ಸತೀಶ ಕಣಿಪ್ಪಿಲ, ಪುತ್ರಿಯರಾದ ಶ್ರೀಮತಿ ಲೀಲಾವತಿ ಲಕ್ಷ್ಮಣ ರೆಂಕಿಲ್ ಮೊಟ್ಟೆ, ಸೊಸೆ ಶ್ರೀಮತಿ ಸುನಿತಾ,ಸಹೋದರ ಈಶ್ವರ ನಾಯ್ಕ ಮತ್ತು ಸಹೋದರಿ ಪದ್ಮಾವತಿ ಹಾಗು ಅಳಿಯಂದಿರು ಮೊಮ್ಮಕ್ಕಳು, ಕುಟುಂಬಸ್ಥರು ಉಪಸ್ಥಿತರಿದ್ದರು.