ಕುಕ್ಕನ್ನೂರು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದಲ್ಲಿ ಕಾಲಾವಧಿ ಉತ್ಸವಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಜರುಗಿದ ನಾಯರ್ ನೇಮ ಉತ್ಸವ

0

ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಗಳ ಕಾಲಾವಧಿ ಉತ್ಸವವು ಮೇ.೧ರಿಂದ ಆರಂಭಗೊಂಡಿದೆ. ಮೇ.೪ರಂದು ಬೆಳಗ್ಗೆ ನಡೆದ ನಾಯರ್ ನೇಮದ ಉತ್ಸವದ ಸಂದರ್ಭ ಸಾವಿರಾರು ಭಕ್ತರು ಭಾಗವಹಿಸಿ, ದೈವದ ಪ್ರಸಾದ ಸ್ವೀಕಾರ ಮಾಡಿದರು.


ಮೇ.೧ರಂದು ಬೆಳಗ್ಗೆ ದೈವಸ್ಥಾನದಲ್ಲಿ ಮುಂಡೈಗೆ ಶೃಂಗಾರ ಮಾಡಲಾಯಿತು. ರಾತ್ರಿ ದೇವರ ಪೂಜೆ ನಡೆಯಿತು. ಮೇ.೨ರಂದು ಗಣಪತಿ ಹೋಮದ ಬಳಿಕ ಧ್ವಜಾರೋಹಣ ನಡೆಯಿತು. ರಾತ್ರಿ ಸಂಕ್ರಮಣ ವಾಲಸಿರಿ, ಕೊಡಿ ಬಂಡಿ ಉತ್ಸವ ನಡೆಯಿತು. ಮೇ.೩ರಂದು ಬೆಳಗ್ಗೆ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆ ನಡೆದು ಮಧ್ಯಾಹ್ನ ಪ್ರಸಾದ ವಿತರಣೆಯ ಬಳಿಕ ಅನ್ನದಾನ ನಡೆಯಿತು. ರಾತ್ರಿ ನಡುಬಂಡಿ ಉತ್ಸವ ಜರುಗಿತು. ಮೇ.೪ರಂದು ಬೆಳಗ್ಗೆ ಕಿರಿಯರ ನೇಮ, ಬಳಿಕ ನಾಯರ್ ನೇಮ ನಡೆಯಿತು. ದೈವಸ್ಥಾನದ ಮುಂಭಾಗದ ರಸ್ತೆಯ ಪಕ್ಕದಲ್ಲಿರುವ ದೈವದ ಕಟ್ಟೆಯ ಬಳಿ ನಡೆದ ಈ ಉತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿದರು. ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಕೂಡಾ ಜನರು ನಿಂತು ದೈವದ ನರ್ತನವನ್ನು ಕಣ್ತುಂಬಿಕೊಂಡರು. ಹರಕೆ ಸ್ವೀಕಾರದ ಬಳಿಕ ಪ್ರಸಾದ ವಿತರಣೆ ನಡೆಯಿತು. ಬಳಿಕ ಅನ್ನಸಂತರ್ಪಣೆ ಜರುಗಿತು. ರಾತ್ರಿ ಸಂಕ್ರಮಣ ಪೂಜೆ, ಸಮಾರಾಧನೆ ನಡೆಯಿತು.


ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಬಾಲಕೃಷ್ಣ ಗೌಡ ಎನ್.ಎಸ್. ನಡುಬೆಟ್ಟು, ಪ್ರಧಾನ ಅರ್ಚಕರಾದ ಸುಭಾಷ್ ರೈ ಕುಕ್ಕನ್ನೂರು, ಆಡಳಿತ ಮಂಡಳಿ ಸದಸ್ಯರುಗಳಾದ ಪುಟ್ಟಣ್ಣ ಗೌಡ ಹುಲಿಮನೆ, ಎಸ್.ಎನ್. ರುಕ್ಮಯ್ಯ ಗೌಡ ನಡುಮನೆ, ದೇವಿಪ್ರಸಾದ್ ಗೌಡ ನೆಕ್ರಾಜೆ, ವೆಂಕಟ್ರಮಣ ಭಟ್ ಬೊಮ್ಮೆಟ್ಟಿ, ಗಂಗಾಧರ ಆಚಾರ್ಯ, ಚಿನ್ನಯ್ಯ ಆಚಾರ್ಯ ಕುಕ್ಕನ್ನೂರು, ಶೇಷಪ್ಪ ರೈ ಕುಕ್ಕನ್ನೂರು, ಸತೀಶ್ ಕೊಮ್ಮೆಮನೆ, ಗಂಗಾಧರ ರೈ ಸೋಣಂಗೇರಿ, ಕುಕ್ಕನ್ನೂರು ಹದಿನಾರು ಒಕ್ಕಲು, ಸೋಣಂಗೇರಿ ಹತ್ತು ಒಕ್ಕಲಿನವರು ಹಾಗೂ ಊರ ಮತ್ತು ಪರವೂರ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕಾರ ಮಾಡಿದರು.
ಮೇ.೫ರಂದು
ಮೇ.೫ರಂದು ಬೆಳಗ್ಗೆ ವಾಲರಿಸಿ, ಕಡೆಬಂಡಿ ಉತ್ಸವ, ಹಿರಿಯರ ನೇಮ ನಡೆದು ಹರಿಕೆ ಕಾಣಿಕೆ ಸ್ವೀಕಾರವಾಗಿ, ಆರಾಟ ನಡೆಯುವುದು. ಬಳಿಕ ಧ್ವಜಾವರೋಹಣ, ಅಂಬುಕಾಯಿ, ಹಣ್ಣುಕಾಯಿ ನಡೆಯುವುದು.