ನಿವೃತ್ತ ಯೋಧ ಹರಿಶ್ಚಂದ್ರ ಪರಮಲೆ ವಿಧಿವಶ

0

ನಿವೃತ್ತ ಯೋಧ ಯೇನೆಕಲ್ ಗ್ರಾಮದ ಹರಿಶ್ಚಂದ್ರ ಪರಮಲೆಯವರು ಮೇ.2 ರಂದು ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು.
1983 ರಲ್ಲಿ ಭಾರತೀಯ ಸೇನೆಗೆ ಯೋಧರಾಗಿ ಸೇರಿದ್ದ ಹರಿಶ್ಚಂದ್ರ ಗೌಡರು, ಆರ್ಟಿಲ್ಲರಿ ರೆಜಿಮೆಂಟ್ ನಲ್ಲಿ ಕಾರ್ಯನಿರ್ವಹಿಸಿದ್ದರು. ಒಟ್ಟು 18 ವರ್ಷಗಳ ಸರ್ವಿಸ್ ನಲ್ಲಿ ನಾಸಿಕ್, ಅಮೃತಸರ್, ರಾಜಸ್ಥಾನ್, ಜಮ್ಮುವಿನ ಕಾರ್ಗಿಲ್, ಸಾಂಬಾ, ಅಕ್ನೂರ್, ರಂಗ್ಲಾ, ಅಹಮ್ಮದಾಬಾದ್ ಮೊದಲಾದೆಡೆ ಕರ್ತವ್ಯ ನಿರ್ವಹಿಸಿದ್ದರು.
ಸೇನೆಯಿಂದ ನಿವೃತ್ತರಾದ ನಂತರ ಕಡಬದಲ್ಲಿ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಭದ್ರತಾ ಅಧಿಕಾರಿಯಾಗಿದ್ದ ಅವರು ಇತ್ತೀಚೆಗೆ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರೆಂದು ತಿಳಿದುಬಂದಿದೆ. ಮೆರ.2 ರಂದು ಹೃದಯಾಘಾತದಿಂದ ಅವರು ನಿಧನರಾದರು.
ಮೃತರು ಪತ್ನಿ ಪಾರ್ವತಿ, ಪುತ್ರಿಯರಾದ ಧನ್ಯ ಮತ್ತು ಮೋನಿಷ, ಪುತ್ರ ಡೀರೇಂದ್ರರನ್ನು, ಬಂಧುಗಳನ್ನು ಅಗಲಿದ್ದಾರೆ.