ಪೆರುವಾಜೆ ದೇವಸ್ಥಾನದ ಜಮೀನು ಅತಿಕ್ರಮಣ ಆರೋಪ

0

ತಹಶೀಲ್ದಾರ್ ಸ್ಥಳಕ್ಕೆ ಭೇಟಿ – ಸ್ಥಳ ಪರಿಶೀಲನೆ

ಪೆರುವಾಜೆ ಶ್ರೀ ಜಲದುರ್ಗಾದೇವಿ ಉದ್ಭವ ಜಮೀನು ದೇವರಮಾರು ಸರಕಾರಿ ಸ್ಥಳ ಸಂ. ನಂ. 98/2 ರಲ್ಲಿದ್ದು ಈ ಸ್ಥಳದಲ್ಲಿದ್ದ ಮರಗಳನ್ನು ನೆಲಸಮ ಮಾಡಿ ದೇವರ ಕಾಡನ್ನು ಇನ್ನಿಲ್ಲದಂತೆ ಮಾಡಿ ಸರಕಾರಿ ಸ್ಥಳ ಕಬಳಿಸಲು ಹುನ್ನಾರ ನಡೆಸಿರುವುದಾಗಿ ಸುಳ್ಯ ತಹಶೀಲ್ದಾರ್ ರಿಗೆ ಶ್ರೀ ಜಲದುರ್ಗಾ ದೇವಿ ಉದ್ಭವ ದೇವರಮಾರು ಸಮಿತಿಯ ಸಂಚಾಲಕ ನಿತಿನ್ ರಾಜ್ ಶೆಟ್ಟಿ ಮತ್ತು ಸಹ ಸಂಚಾಲಕ ಅಂಗಾರ ಬಜ ಮನವಿ ಮಾಡಿದ್ದು ಮೇ.08 ರಂದು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.
ಸ್ಥಳ ಪರಿಶೀಲನೆ ಮಾಡಿದ ತಹಶೀಲ್ದಾರ್ ಮಂಜುಳ ಎಂ.ರವರು
ಈಗ ಇರುವ ಕುಮ್ಕಿ ಸ್ಥಳವನ್ನು ಯಥಾಸ್ಥಿತಿಯಲ್ಲಿ ಇರುವಂತೆ ಸೂಚಿಸಿದರೆನ್ನಲಾಗಿದೆ.
ಜಾಗದ ಅಳತೆ ಮಾಡಿದ ನಂತರ ಕುಮ್ಕಿ ಜಾಗ ಯಾರಿಗೆ ಸೇರಿರುವುದಾಗಿ ತಿಳಿಸುವುದಾಗಿ ಹೇಳಿದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ದೇವದಾಸ ಶೆಟ್ಟಿ, ದೇವಸ್ಥಾನದ ಆಡಳಿತಾಧಿಕಾರಿ ಪ್ರವೀಣ್ ಕುಮಾರ್ ಸಿ‌.ವಿ, ಕಚೇರಿ ನಿರ್ವಾಹಕ ವಸಂತ ಆಚಾರ್ಯ, ಸಚಿನ್ ರಾಜ್ ಶೆಟ್ಟಿ, ನಿತಿನ್ ರಾಜ್ ಶೆಟ್ಟಿಯವರು ಉಪಸ್ಥಿತರಿದ್ದರು.