ಮಂಗಳೂರಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
ಚಿಕಿತ್ಸೆಯ ನೆರವಿಗೆ ಸಹೃದಯಿಯವರಲ್ಲಿ ಕುಟುಂಬದ ಮನವಿ
ಎರಡು ದಿನದ ಹಿಂದೆ ರಸ್ತೆ ಅಪಘಾತದಲ್ಲಿ ಕೈ ಕಾಲು ಮತ್ತು ತಲೆಗೆ ತೀರ್ವ ಏಟಾಗಿ ಮಂಗಳೂರಿನ ಕೆ. ಎಂ. ಸಿ. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಂಞಣ್ಣ ಎಂಬವರ ಮುಂದಿನ ಚಿಕಿತ್ಸೆಗೆ ಹಣದ ಅವಶ್ಯಕತೆ ಇದ್ದು ಮನೆಯವರು ಸಹೃದಯಿಗಳಿಂದ ಕೈಲಾದಷ್ಟು ಧನಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
ಎಡಮಂಗಳ ಬಳಿಯ ಕೇರ್ಪಡ ನಿವಾಸಿ ಕುಂಞಣ್ಣ ಎಂಬವರು ಮೇ. 4ರಂದು ಸಂಜೆ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಬರುವಾಗ ಪುಂಚತ್ತಾರುವಿನಲ್ಲಿ ಮೇ. 4ರ ಸಂಜೆ ಮಿನಿ ಟೆಂಪೋ ಮತ್ತು ಕುಂಞಣ್ಣರವರ ದ್ವಿಚಕ್ರ ವಾಹನ ಪರಸ್ಪರ ಢಿಕ್ಕಿಯಾಗಿತ್ತು. ಪರಿಣಾಮ ಕುಂಞಣ್ಣರವರು ಗಂಭೀರ ಗಾಯಗೊಂಡರು. ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೋಯ್ದು ಅಲ್ಲಿಂದ ತುರ್ತು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಈಗಾಗಲೇ ಪ್ರಥಮ ಹಂತದ ಚಿಕಿತ್ಸೆ ನಡೆಯುತ್ತಿದ್ದು ಇನ್ನು ಕೆಲ ದಿನಗಳ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ನಡೆಯಬೇಕಾಗಿದೆ. ಕುಂಞಣ್ಣರವರು ಕೂಲಿ ಕಾರ್ಮಿಕರಾಗಿದ್ದು, ಅವರ ದುಡಿಮೆಯಿಂದ ಮನೆಯ ಖರ್ಚು ವೆಚ್ಚಗಳು ನಡೆಯುತ್ತಿತ್ತು. ಅಪಘಾತ ದಿಂದ ಮನೆಯ ಯಜಮಾನ ಆಸ್ಪತ್ರೆ ಸೇರಿರುವ ಕಾರಣ ಮನೆಯವರು ದಿಕ್ಕು ತೋಚದಂತಾಗಿದ್ದಾರೆ.
ಈಗಾಗಲೇ ಆಸ್ಪತ್ರೆಯಲ್ಲಿರುವ ಕುಂಞಣ್ಣರವರ ಚಿಕಿತ್ಸೆಗೆ ಸುಮಾರು 2 ಲಕ್ಷ ಖರ್ಚಾಗಿದೆ. ಇನ್ನು ಮುಂದಿನ ಚಿಕಿತ್ಸೆಗೆ ಸುಮಾರು 5ರಿಂದ 6 ಲಕ್ಷ ರೂ. ಹಣ ಬೇಕೆಂದು ಆಸ್ಪತ್ರೆಯವರು ತಿಳಿಸಿರುವುದರಿಂದ ಅಷ್ಟೊಂದು ಮೊತ್ತ ಭರಿಸಲು ಕುಂಞಣ್ಣರವರ ಮನೆಯವರು ಅಸಕ್ತರಾಗಿದ್ದಾರೆ. ಕೂಲಿ ಕಾರ್ಮಿಕರಗಿರುವ ಕುಂಞಣ್ಣರವರಿಗೆ ದುಡಿಮೆ ಮಾತ್ರ ಆಧಾರವಾಗಿದ್ದು, ಬೇರೆ ಯಾವುದೇ ಮೂಲಗಳಿಂದ ಆದಾಯವಿಲ್ಲದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಮನೆಯವರು ಸಹೃದಯಿಗಳಲ್ಲಿ ಕೈ ಚಾಚಿದ್ದಾರೆ.
ಪತ್ನಿ ಮತ್ತು ಸಣ್ಣ ಮೂವರು ಮಕ್ಕಳನ್ನು ಹೊಂದಿರುವ ಕುಂಞಣ್ಣರವರ ಚಿಕಿತ್ಸೆಗೆ ಸಹೃದಯಿಗಳು ಕೈಲಾದಷ್ಟು ಧನಸಹಾಯ ಮಾಡಿ ಮನೆಯವರಿಗೆ ನೇರವಾಗಬೇಕಾಗಿದೆ.















ಬ್ಯಾಂಕ್ ಖಾತೆ ವಿವರ : ಹೆಸರು(NAME) : MADHUPRIYA
ಖಾತೆ ಸಂಖ್ಯೆ
(Account no.): 1600101010426
IFSC code: CNRB0001600
Bank Name :
canara bank Yenmuru










