ಮಂಡ್ಯ ಬಳಿ ಭೀಕರ ಅಪಘಾತ

0

ಗಾಯಾಳುಗಳಿಗೆ ಸುಳ್ಯ ಕೆ ವಿ ಜಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ, ಚೇತರಿಕೆ

ತುರ್ತು ಸ್ಪಂದನೆ ನೀಡಿದ ಕೆ ವಿ ಜಿ ವೈದ್ಯರು, ಸಿಬ್ಬಂದಿಗಳು ಮತ್ತು ಸುಳ್ಯ ಆಂಬುಲೆನ್ಸ್ ಚಾಲಕರು

ಕೊಡಗು ಜಿಲ್ಲೆಯ ಕುಶಾಲನಗರ ಮೂಲದ ಕುಟುಂಬ ಸದಸ್ಯರು ಪ್ರಯಾಣಿಸುತಿದ್ದ ಇನೋವಾ ಕಾರು ಮಂಡ್ಯ ಬಳಿ ಭೀಕರ ಅಪಘಾತಕ್ಕೀಡಾದ ಘಟನೆ ಮೇ 8 ರಂದು ಬೆಳಿಗ್ಗೆ ಸಂಭವಿಸಿದೆ.
ದುಬೈಯಿಂದ ಸಂಭಂಧಿಕ ರೋರ್ವರನ್ನು ಕರೆತರಲು ಬೆಂಗಳೂರು ಎರ್ಪೋರ್ಟ್ ಗೆ ಹೋಗಿ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಘಟನೆಯಿಂದ ಕಾರಿನ ಚಾಲಕ ಸೇರಿದಂತೆ ಸುಮಾರು 5 ಮಂದಿಗೆ ಗಂಭೀರ ಗಾಯಗಳಾಗಿ ಓರ್ವ ಮಹಿಳೆಯ ಕೈ, ಇನ್ನೋರ್ವ ಮಹಿಳೆಯ ಕಾಲು ಮುರಿತಗೊಂಡಿದ್ದು, ಚಾಲಕ ಅಲ್ತಾಫ್ ಎಂಬು ವರರಿಗೆ ಸೊಂಟದ ಭಾಗಕ್ಕೆ ಗಾಯವಾಗಿದ್ದು,ಮತ್ತಿಬ್ಬರು ಮಕ್ಕಳು ಮುಖ ಹಾಗೂ ಕಾಲಿಗೆ ಗಾಯಗಳಾಗಿ, ಓರ್ವ ವೃದ್ದೆ ಗೆ ಎದೆ ಭಾಗಕ್ಕೆ ಅಲ್ಪ ಪೆಟ್ಟು ಉಂಟಾಗಿದ್ದವು.


ಉಳಿದಂತೆ ಕಾರಿನ ಎದುರು ಶೀಟ್ ನಲ್ಲಿ ತಾಯಿಯ ಮಡಿಲಲ್ಲಿದ್ದ 4 ತಿಂಗಳ ಮಗು ಯಾವುದೇ ಗಾಯವಿಲ್ಲದೆ ಅಪಾಯದಿಂದ ಪಾರಾಗಿದೆ.

ಗಾಯಲುಗಳನ್ನು ಕೂಡಲೇ ಸ್ಥಳೀಯರು ಮಂಡ್ಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದಿಂದ 3 ಆಂಬುಲೆನ್ಸ್ ಗಳಲ್ಲಿ ಮನೆಯವರ ಕೋರಿಕೆ ಮೇರೆಗೆ ಸುಳ್ಯದ ಕೆ ವಿ ಜಿ ಆಸ್ಪತ್ರೆಗೆ ತರಲಾಯಿತು.

ಅಪಘಾತದ ದೃಶ್ಯ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ತರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಿಸಿ ರಸ್ತೆಯ ಸುಗಮ ಸಂಚಾರ ಕ್ಕೆ ಆಂಬುಲೆನ್ಸ್ ಚಾಲಕರು ಮನವಿಗಳನ್ನು ಮಾಡಿಕ್ಕೊಂಡ ಹಿನ್ನೆಲೆ ಯಲ್ಲಿ ತಕ್ಷಣ ಕಾರ್ಯಪ್ರವರ್ತರಾದ ಸಾರ್ವಜನಿಕರು ಅಂಬುಲನ್ಸ್ ಸಂಚಾರಕ್ಕೆ ಸಹಕರಿಸಿದರು.

ಗಯಾಳುಗಳನ್ನು ಸುಳ್ಯ ಕೆ ವಿ ಜಿ ಆಸ್ಪತ್ರೆಗೆ ತರುತ್ತಿರುವ ವಿಷಯ ತಿಳಿದ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯ ತಂಡದವರು ಸಕಲ ಸಿದ್ಧತೆಯೊಂದಿಗೆ ಸನ್ನದ್ದರಾಗಿದ್ದು ತುರ್ತು ಸ್ಪಂದನೆಯನ್ನು ನೀಡಿದರು.
ಗಾಯಾಳುಗಳನ್ನು ಆಸ್ಪತ್ರೆಗೆ ತರುತಿದ್ದಂತೆ ಕ್ಷಣ ಮಾತ್ರದಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಪ್ರಥಮ ಚಿಕಿತ್ಸೆ ಮತ್ತು ಪರೀಕ್ಷೆಗಳು ನಡೆದು ಬಳಿಕ ಚಿಕಿತ್ಸೆ ಮುಂದುವರಿಸಿದರು.

ಒಟ್ಟು 6 ಮಂದಿಯ ಪೈಕಿ ಮೂವರು ರಾತ್ರಿಯೇ ಡಿಸ್ಚಾರ್ಜ್ ಆಗಿದ್ದು ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಯಲಿದ್ದು ಇನ್ನೋರ್ವ ಮಹಿಳೆ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತಿದ್ದು ಎಲ್ಲರೂ ಚೇತರಿಕೆಯಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ಮಾಹಿತಿ ಪಡೆದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ್ದ ಮಂಡ್ಯ ಹಾಗೂ ಮೈಸೂರು ಕೆ ಎಂ ಸಿ ಸಿ ಸದಸ್ಯರು,
ಮಂಡ್ಯದಿಂದ ಸುಳ್ಯ ವರೆಗಿನ ರಾಷ್ಟ್ರೀಯ ಹೆದ್ದಾರಿ ಬದಿಯ ಸಾರ್ವಜನಿಕರು, ಸುಳ್ಯ ತಾಲೂಕು ಅಂಬುಲನ್ಸ್ ಚಾಲಕರ ಮಾಲಕ ಸಂಘದವರು ಹಾಗೂ
ಸುಳ್ಯ ಠಾಣಾ ಪೊಲೀಸ್ ಸಿಬ್ಬಂದಿಗಳಿಗೂ ಸುಳ್ಯ ವ್ಯಾಪ್ತಿಯ ಸಾರ್ವಜನಿಕರು,
ಆಟೋ ಚಾಲಕರು,
ಸಂಪಾಜೆ ಚೆಕ್ ಪೋಸ್ಟ್ ಸಿಬ್ಬಂದಿಗಳು,ಕಲ್ಲುಗುಂಡಿ ಉಪಠಾಣಾ ಸಿಬ್ಬಂದಿಗಳು,
ಕೊಯನಾಡು,ಸಂಪಾಜೆ,ಕಲ್ಲುಗುಂಡಿ,ಅರಂತೋಡು,ಪೇರಾಜೆ,ಅರಂಬೂರು ಭಾಗದ ಜನತೆ ಸಹಕಾರ ನೀಡಿದರು.