ವ್ಯಕ್ತಿಯನ್ನು ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ
ಸುಬ್ರಹ್ಮಣ್ಯ ತೀರ್ಥ ಯಾತ್ರೆಗೆಂದು ಕುಟುಂಬದ ಸದಸ್ಯರೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದ ಉತ್ತರ ಕರ್ನಾಟಕ ಮೂಲದ ವ್ಯಕ್ತಿ ಕಾಣೆಯಾಗಿದ್ದು ಈ ಬಗ್ಗೆ ಅವರ ಮನೆಯವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಬಗ್ಗೆ ವರದಿ ಯಾಗಿದೆ. ಕಾಣೆಯಾಗಿರುವ ವ್ಯಕ್ತಿ ಹೂವಿನಹಡಗಲಿಯ ಅಕ್ಕಿಪೇಟೆ ನಿವಾಸಿ ಮೃತ್ಯುಂಜಯ ೪೫ ವರ್ಷ ಎಂಬವರು ಎನ್ನಲಾಗಿದೆ.















ಈ ಬಗ್ಗೆ ವ್ಯಕ್ತಿಯ ಸಂಬAಧಿ ಸಿದ್ದನ ಗೌಡ ಎಂಬುವವರು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದು ನೀಡಿರುವ ದೂರಿನಲ್ಲಿ ‘ಮೃತ್ಯುಂಜಯ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದು,ಇವರಿಗೆ ೧೩ ವರ್ಷ ಪ್ರಾಯ ಚಂದನಾ ಎಂಬ ಹೆಸರಿನ ಮಗಳಿರುವುದಾಗಿದೆ. ಇವರು ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು, ಕುಡಿತದ ಚಟವನ್ನು ಬಿಡಿಸಲು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಕುಡಿತದ ಚಟವನ್ನು ಬಿಟ್ಟಿರುವುದಿಲ್ಲ. ದಿನಾಂಕ 24-4-25 ರಂದು ಊರಿನಿಂದ ಶೃಂಗೇರಿ, ಧರ್ಮಸ್ಥಳ, ಸುಬ್ರಹ್ಮಣ್ಯ ದೇವಾಸ್ಥಾನಕ್ಕೆಂದು ಸಂಬAಧಿಕರೊ0ದಿಗೆ ಪತ್ನಿ ಮಕ್ಕಳು,ತಂಗಿ ಸಹನಾ ಮತ್ತು ಅವಳ ಮಗಳು ಚಂದನಾಳೊ0ದಿಗೆ ಹೊರಟಿದ್ದು ಮೃತ್ಯುಂಜಯನು ಕೂಡಾ ಹೊರಟು ಬಂದಿದ್ದರು. ಶೃಂಗೇರಿ ಧರ್ಮಸ್ಥಳ ದೇವಸ್ಥಾನಗಳಿಗೆ ಭೇಟಿ ನೀಡಿ ನಂತರ ದಿನಾಂಕ 26-4-25 ರಂದು ಸುಬ್ರಹ್ಮಣ್ಯಕ್ಕೆ ಬಂದು ಸುಬ್ರಹ್ಮಣ್ಯದ ನಿಖಿಲ್ ವಸತಿಗೃಹದಲ್ಲಿ ಬಾಡಿಗೆ ರೂಂ ಮಾಡಿ ಎಲ್ಲರೂ ತಂಗಿದ್ದು ಸಮಯ ಸುಮಾರು ಮಧ್ಯಾಹ್ನ ೩-೩೦ ಗಂಟೆಗೆ ಮೃತ್ಯುಂಜಯನು ರೂಮಿನಿಂದ ಹೊರಗೆ ಬಂದಿದ್ದು ಬಳಿಕ ಆತನು ಕಾಣದೇ ಇದ್ದು ಜೊತೆಗೆ ಇದ್ದ ಎಲ್ಲರೂ ಹುಡುಕಾಡಿದರೂ ಸಿಕ್ಕಿರುವುದಿಲ್ಲ.ನಂತರ ಮೃತ್ಯುಂಜಯನ ಜೊತೆಗೆ ಬಂದಿದ್ದ ಆತನ ಪತ್ನಿ ಸಹನ ಮತ್ತು ಉಳಿದವರು ಮೃತ್ಯುಂಜಯನು ವಾಪಾಸು ಊರಿಗೆ ಹೋಗಿರಬಹುದೆಂದು ಎಲ್ಲರೂ ಊರಿಗೆ ಹೋಗಿದ್ದು ಆದರೆ ಮೃತ್ಯುಂಜಯನು ಊರಿಗೆ ಬಾರದೇ ಇರುವುದರಿಂದ ಹಾಗೂ ಮೃತ್ಯುಂಜಯನ ಬಗ್ಗೆ ಯಾವುದೇ ಸುಳಿವು ಸಿಗದೇ ಇರುವುದರಿಂದ ಕಾಣೆಯಾದ ಮೃತ್ಯುಂಜಯನನ್ನು ಪತ್ತೆ ಮಾಡಿಕೊಡಬೇಕಾಗಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಕೈ ಗೊಂಡಿರುವ ಪೊಲೀಸರು ಕಾಣೆಯಾಗಿರುವ ವ್ಯಕ್ತಿಯನ್ನು ಸಾರ್ವಜನಿಕರು ಕಂಡು ಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚೆಹರೆ ಹೆಸರು ಮೃತ್ಯುಂಜಯ, ಪ್ರಾಯ 45 , ಎತ್ತರ : 5.6, ಮೈಕಟ್ಟು ಸಾಧಾರಣ ಶರೀರ, ತಿಳಿದಿರುವ ಭಾಷೆ : ಕನ್ನಡ, ಇಂಗ್ಲೀಷ್ ಹಿಂದಿ
ಧರಿಸಿದ ಬಟ್ಟೆ ಬರೆ : ಹಸಿರು ಬಣ್ಣದ ಮುಕ್ಕಾಲು ಪ್ಯಾಂಟ್ ಹಾಗೂ ಸಿಮೆಂಟ್ ಬಣ್ಣದ ಟೀ ಶರ್ಟ್ ವಿದ್ಯಾಭ್ಯಾಸ: ದ್ವಿತೀಯ ಬಿಎ ವೃತ್ತಿ: ಚಾಲಕ ಗುರುತು : ಎಡ ಕೈ ಹೆಬ್ಬೆರಳಿನ ಹತ್ತಿರ ಕೈಯಲ್ಲಿ ಗಾಯದ ಹೊಲಿಗೆಯ ಗುರುತು, ಮಾತನಾಡುವ ಭಾಷೆ: ಕನ್ನಡ ಇಂಗ್ಲೀಷ್ ಹಿಂದಿ ಭಾಷೆ ಮಾತನಾಡುತ್ತಾರೆ.
ಮೊಬೈಲ್ ದೂರವಾಣಿ ಹೊಂದಿರುವುದಿಲ್ಲ. ಮೇಲ್ಕಂಡ ಚೆಹರೆಯುಳ್ಳ ವ್ಯಕ್ತಿ ಕಂಡುಬ0ದಲ್ಲಿ ಪೊಲೀಸ್ ಉಪನಿರೀಕ್ಷಕರು ಸುಬ್ರಹ್ಮಣ್ಯ ಪೊಲೀಸ್ ಠಾಣೆ 08257-281250 ಮೊಬೈಲ್ 9480805366 ಮಾಹಿತಿ ನೀಡುವಂತೆ ಪ್ರಕಟಣೆ ನೀಡಿದೆ.










