ಪಾಕಿಸ್ತಾನದೊಂದಿಗಿನ ಯುದ್ಧದ ಸಂದರ್ಭಕ್ಕಾಗಿ ಒಂದು ಹೊತ್ತು ಊಟ ಬಿಟ್ಟ ವಿನಯ ಕಂದಡ್ಕ

0

ಭಾರತ – ಪಾಕಿಸ್ತಾನದ ನಡುವೆ ಅಘೋಷಿತ ಯುದ್ಧ ನಡೆಯುತ್ತಿರುವುದರಿಂದಾಗಿ ದೇಶಕ್ಕೆ ನೆರವಾಗುವ ಉದ್ದೇಶದಿಂದ ತಾನು ಒಂದು ಹೊತ್ತು ಊಟ ಬಿಟ್ಟಿರುವುದಾಗಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾಗಿರುವ ವಿನಯ ಕುಮಾರ್ ಕಂದಡ್ಕ ತಿಳಿಸಿದ್ದಾರೆ.

” ಹಿಂದೆ ಭಾರತ – ಪಾಕ್ ಯುದ್ಧ ಆದಾಗ ದೇಶಕ್ಕಾಗಿ ಒಂದು ಹೊತ್ತು ಊಟ ಬಿಡುವಂತೆ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಜನರಿಗೆ ಕರೆ ನೀಡಿದ್ದರು. ಈಗ ಅಂತಹ ಕರೆ ಯಾರೂ ನೀಡಿಲ್ಲ. ಆದರೆ ದೇಶದ ಹಿತದೃಷ್ಟಿಯಿಂದ ಮಧ್ಯಾಹ್ನದ ಊಟ ಬಿಟ್ಟು ಅದರ ಹಣವನ್ನು ರೂ.60 ರಂತೆ ಕೂಡಿಟ್ಟು ಭಾರತ – ಪಾಕ್ ಯುದ್ಧ ಮುಗಿದ ಬಳಿಕ ದೇಶದ ಪ್ರಧಾನಮಂತ್ರಿಗಳ ಫಂಡ್ ಗೆ ಸಂದಾಯ ಮಾಡಲಿದ್ದೇನೆ” ಎಂದವರು ಪತ್ರಕರ್ತರಿಗೆ ತಿಳಿಸಿದ್ದಾರೆ.