ವೈರಲ್ ಆದ ಪಟ್ಟಿಯಲ್ಲಿ ಒಂದು ಬದಲಾವಣೆ ?
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಪಟ್ಟಿ ಅಂತಿಮಗೊಂಡು ಸರಕಾರದಿಂದ ಆದೇಶವಾಗಿದ್ದು, ಬಿಡುಗಡೆಯಷ್ಟೇ ಬಾಕಿ ಇದೆ ಎಂದು ತಿಳಿದುಬಂದಿದೆ.















ಕೆಲವು ದಿನಗಳ ಹಿಂದೆ ಉಸ್ತುವಾರಿ ಸಚಿವರಿಂದ ಮುಜರಾಯಿ ಸಚಿವರಿಗೆ ಹೋದ ಪಟ್ಟಿ ವೈರಲ್ ಆದ ಹಿನ್ನೆಲೆಯಲ್ಲಿ ಸಂಚಲನ ಸೃಷ್ಟಿಯಾದ ಹಿನ್ನೆಲೆಯಲ್ಲಿ ಅಧಿಕೃತ ಆದೇಶ ನೆನೆಗುದಿಗೆ ಬಿದ್ದಿತ್ತು.
ಇದೀಗ ಸರಕಾರದಿಂದ ಅಧಿಕೃತ ಆದೇಶ ಆಗಿದ್ದು ಕಳೆದ ಪಟ್ಟಿಯಲ್ಲಿದ್ದ ಎನ್. ಜಯಪ್ರಕಾಶ್ ರೈ ಬದಲಿಗೆ ಮಲೆಕುಡಿಯ ಸಮುದಾಯದ ಸೌಮ್ಯ ಅವರ ಹೆಸರು ಸೇರ್ಪಡೆಗೊಂಡಿರುವುದಾಗಿ ತಿಳಿದುಬಂದಿದೆ.
ನೂತನವಾಗಿ ನೇಮಕಗೊಂಡ ಸದಸ್ಯರೆಲ್ಲ ಇಂದು ಸಂಜೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು. ಇಂದೇ ಸಭೆ ಸೇರಿ ಅಧ್ಯಕ್ಷರ ಆಯ್ಕೆ ನಡೆದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ ಅಧ್ಯಕ್ಷತೆಗೆ ಮಹೇಶ್ ಕುಮಾರ್ ಕರಿಕ್ಕಳ, ಅಶೋಕ್ ನೆಕ್ರಾಜೆ, ಡಾ. ರಘು, ಹರೀಶ್ ಇಂಜಾಡಿಯವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸಮ್ಮುಖದಲ್ಲಿ ಅಧ್ಯಕ್ಷತೆಯನ್ನು ಅಂತಿಮ ಗೊಳಿಸುವ ನಿರ್ಧಾರಕ್ಕೆ ಬರಲಾಯಿತು ಎಂದು ತಿಳಿದು ಬಂದಿದೆ. ಸೋಮವಾರ ಅಂತಿಮಗೊಳ್ಳುವ ಸಾಧ್ಯತೆ ಇದೆ.
ಕಳೆದ ಬಾರಿ ಪಟ್ಟಿ ವೈರಲ್ ಆಗಿ ವಿವಾದವಾದ ಹಿನ್ನೆಲೆಯಲ್ಲಿ ಅಧಿಕೃತ ಪಟ್ಟಿಯನ್ನು ಅಧಿಕಾರ ಸ್ವೀಕಾರದವರೆಗೆ ಬಿಡುಗಡೆಯಾಗದಂತೆ ಜಾಗೃತೆ ವಹಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.










