














ಪಂಜದ ಪಾದೆ ನಿವೃತ್ತ ಉಪನ್ಯಾಸಕರು, ಜೋತಿಷಿ ಪದ್ಮನಾಭ ಗೌಡ ರವರು ಮೇ.11 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 87ವರುಷ ವಯಸ್ಸಾಗಿತ್ತು. ಅವರು ಕೊಂಬರು, ಕೇನ್ಯ, ಪುತ್ತೂರು, ಪಂಜ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದರು. ಬಳಿಕ ಅವರು ಮುಂಬಡ್ತಿ ಹೊಂದಿ ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಮೃತರು ಪುತ್ರರಾದ ಗಿರೀಶ್, ಸತೀಶ್, ಪುತ್ರಿಯರಾದ ರೇಖಾ,ನಂದಾ, ಸೊಸೆಯಂದಿರು, ಅಳಿಯಂದಿರು ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.










