ಇಂದು ವಸಂತಪೂಜೆ, ಡೋಲೋತ್ಸವ, ಅನುಗ್ರಹ ಸಂದೇಶ
ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನರಸಿಂಹ ಜಯಂತಿ ಮಹೋತ್ಸವ ನಡೆಯುತಿದ್ದು ಇಂದು ಶ್ರೀ ನರಸಿಂಹ ಜಯಂತಿಯಂದು ಪ್ರಾಾತಃಕಾಲ ಶ್ರೀ ನರಸಿಂಹ ದೇವರ ಮಹಾಭಿಷೇಕ ನಡೆಯಲಿದೆ , ರಾತ್ರಿ ಹೊರಾಂಗಣ ಮತ್ತು ರಾಜ ಬೀದಿಯಲ್ಲಿ ವಿಮಾನೋತ್ಸವ, ವಸಂತಪೂಜೆ, ಡೋಲೋತ್ಸವ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ 9.00ರಿಂದ 11.00ರ ವರೆಗೆ ಯಜ್ಞೇಶ್ ಆಚಾರ್ ಮತ್ತು ಬಳಗದವರಿಂದ ಭಕ್ತಿಿ ಸಂಗೀತ ಹಾಗೂ ಬೆಳಿಗ್ಗೆೆ ಗಂಟೆ 11.00ರಿಂದ ಆನಂದತೀರ್ಥ ತತ್ವದರ್ಶಿನೀ ಸಭಾ
ಅನುಗ್ರಹ ಸಂದೇಶ ಇರಲಿದ್ದು ಪೇಜಾವರ ಅಧೋಕ್ಷಜ ಮಠ ಉಡುಪಿ ಯ ಶ್ರೀ ಶ್ರೀ ವಿಶ್ವ ಪ್ರಸನ್ನತೀರ್ಥ ಹಾಗೂ
ಸುಬ್ರಹ್ಮಣ್ಯ ಮಠದ ಡಾl ಶ್ರೀ ಶ್ರೀ ವಿಶ್ವಪ್ರಸನ್ನ ಶ್ರೀಪಾದರಿಂದ ನಡೆಯಲಿದೆ.















ಬಳಿಕ
ವಿದ್ವಾನ್ ಕಲ್ಲಾಾಪುರ ಪವಮಾನ ಆಚಾರ್ಯ ಅವರಿಂದ ” ನರಸಿಂಹ ಪ್ರಾದುರ್ಭಾವ” ವಿಷಯದ ಬಗ್ಗೆ ಉಪನ್ಯಾಾಸ ನಡೆಯಲಿದೆ.
ಸಂಜೆ ಗಂಟೆ 4.00ರಿಂದ ಪುರಾಣೇತಿಹಾಸಗೋಷ್ಠಿ ನಡೆಯಲಿದ್ದು ಶ್ರೀ ಶ್ರೀ ವಿದ್ಯಾಪ್ರಸನ್ನ ತೀಥ ಶ್ರೀಪಾದರು ನಿರ್ವಾಹಕ ಅಧ್ಯಕ್ಷತೆ ವಹಿಸಲಿದ್ದಾರೆ.
ಪೂರ್ಣಪ್ರಜ್ಞಾ ವಿದ್ಯಾಾಪೀಠ ಬೆಂಗಳೂರು ನಿವೃತ್ತ ಪ್ರಾಾಂಶುಪಾಲರು, ಮಹಾಮಹೋಪಾಧ್ಯಾಾಯ ಎ. ಹರಿದಾಸ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ವಿದ್ವಾಾಂಸರುಗಳುಗಳಾದ ಡಾ. ಬಿ.ಎನ್. ವಿಜಯೇಂದ್ರ ಆಚಾರ್ಯ ಮೈಸೂರು, ಡಾ. ವೆಂಕಟೇಶ ಆಚಾರ್ಯ ಕುಲಕರ್ಣಿ, ಬೆಂಗಳೂರು ಭಾಗವಹಿಸಲಿದ್ದಾರೆ.










