ನೀರು ಬಿಡಲು ತೋಟಕ್ಕೆ ಹೋಗಿದ್ದಾಗ ವಿದ್ಯುದಾಘಾತಕ್ಕೊಳಗಾಗಿ ಕೃಷಿಕ ಮೃತ್ಯು
ನೀರು ಬಿಡಲು ತೋಟಕ್ಕೆ ಹೋದ ಕೃಷಿಕರೊಬ್ಬರು ವಿದ್ಯುತ್ ಶಾಕ್ ಗೆ ಒಳಗಾಗಿ ಜೀವ ಕಳೆದುಕೊಂಡ ಘಟನೆ ಇದೀಗ ಅರಂತೋಡಿನಿಂದ ವರದಿಯಾಗಿದೆ.















ಅರಂತೋಡಿನ ಉಳುವಾರು ಮನೆ ಸುಕುಮಾರರ ಸಹೋದರ ಆಟೋರಿಕ್ಷಾ ಚಾಲಕರೂ ಆಗಿರುವ ಬಿಳಿಯಾರಿನ ಪುರುಷೋತ್ತಮ ಎಂಬವರು ವಿದ್ಯುದಾಘಾತಕ್ಕೆ ಒಳಗಾದವರು. ಅವರನ್ನು ಕೂಡಲೇ ಅಂಬ್ಯುಲೆನ್ಸ್ ನಲ್ಲಿ ಕೆ.ವಿ.ಜಿ. ಆಸ್ಪತ್ರೆಗೆ ತರಲಾಗಿದೆ. ವೈದ್ಯರು ಸಾವನ್ನು ದೃಢಪಡಿಸಿರುವುದಾಗಿ ತಿಳಿದುಬಂದಿದೆ.










