ಪಂಜ :ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ – ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಗೆಲುವಾಗಿ ಪ್ರಾರ್ಥನೆ

0

ರಾಜ್ಯ ಪ್ರಶಸ್ತಿ ಪುರಸ್ಕೃತ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ) ವತಿಯಿಂದ ಪಂಚಶ್ರೀ ಲೆಜೆಂಡ್ಸ್ ಪ್ರೀಮಿಯರ್ ಲೀಗ್ 2025 season-1 ಮೇ.11 ರಂದು ಕೋಟಿ ಚೆನ್ನಯ ಕ್ರೀಡಾಂಗಣ ಗರಡಿಯ ಮುಂಭಾಗದ ಮೈದಾನ ಪಂಜದಲ್ಲಿ 5 ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಬೆಳಗ್ಗೆ ಸಾಂಕೇತಿಕವಾಗಿ ಉದ್ಘಾಟಣೆಯನ್ನು ರಾಷ್ಟ್ರೀಯ ಹಿರಿಯ ಕ್ರೀಡಾಪಟು ಬಾಲಕೃಷ್ಣ ಕುದ್ವ ಹಾಗೂ ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟು ಕುಶಾಲಪ್ಪ ಗೌಡ ದೊಡ್ಡಮನೆ ಇವರು ಕ್ರಿಕೆಟ್ ಪಂದ್ಯಾಕೂಟಕ್ಕೆ ಚಾಲನೆಯನ್ನು ನೀಡಿದರು.

ಸಂಜೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಹಿತೇಶ್ ಪಂಜದಬೈಲು ವಹಿಸಿದ್ದರು, ಬಹುಮಾನ ವಿತರಕರಾಗಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ , ಅತಿಥಿಗಳಾದ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ ಪಳಂಗಾಯ , ನಿವೃತ್ತ ಯೋಧ ಮನೋಹರ ಗೆಜ್ಜೆ ಬಳ್ಪ , ಪ್ರಗತಿ ಪರ ಕೃಷಿಕ ಲಕ್ಷ್ಮಣ ಗೌಡ ಜಾರಿಗೆತ್ತಡಿ , ಪಂದ್ಯಾಕೂಟದ ಸಂಯೋಜಕರಾದ
ದಿನೇಶ್ ನಾಗತೀರ್ಥ ಮತ್ತು ವರ್ಷಿತ್ ಪಂಜ , ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಶಶಿದಾಸ್ ನಾಗತೀರ್ಥ , ಖಜಾಂಚಿ ನವೀನ್ ನಾಗತೀರ್ಥ , 5 ತಂಡಗಳ ಮಾಲಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಗೆಲುವಾಗಲಿ ಎಂದು ವಿಶೇಷವಾಗಿ ಕ್ಲಬ್ ವತಿಯಿಂದ ಪ್ರಾರ್ಥನೆ ಮಾಡಲಾಯಿತು. ಪಂದ್ಯಾಕೂಟದ ಪ್ರಥಮ ಸ್ಥಾನವನ್ನು ಪ್ರಶಾಂತ್ ಪಲ್ಲತ್ತಡ್ಕ ಮತ್ತು ರವಿ ಪಲ್ಲತ್ತಡ್ಕ ಮಾಲಕತ್ವದ ರಾಯಲ್ ಚಾಲೆಂಜರ್ಸ್ ಪಲ್ಲತ್ತಡ್ಕ,, ದ್ವಿತೀಯ ಸ್ಥಾನವನ್ನು ಪ್ರಶಾಂತ್‌ ಎಣ್ಣೆಮಜಲು ಮತ್ತು ಗುರುಪ್ರಸನ್ನ ಗುಂಡಡ್ಕ ಮಾಲಕತ್ವದ ಪಾಂಚಾಲ ವಾರಿಯರ್ಸ್, ತೃತೀಯ ಸ್ಥಾನವನ್ನು ವಿನಯ್ ಕರಿಕ್ಕಳ ಮಾಲಕತ್ವದ ಹನಿ ಹಂಟರ್ಸ್* ತಂಡ ಪಡೆದಿರುತ್ತದೆ.

ವೈಯಕ್ತಿಕ ಬಹುಮಾನವನ್ನು ಬೆಸ್ಟ್ ಫೀಲ್ಡರ್ ಪಾಂಚಾಲ ವಾರಿಯರ್ಸ್ ತಂಡದ ಅಸ್ತಿಕ್ ಅಲೆಕ್ಕಾಡಿ, ಬೆಸ್ಟ್ ಬ್ಯಾಟ್ಸ್‌ಮನ್ ಹನಿ ಹಂಟರ್ಸ್ ತಂಡದ ಕವಿನ್ ಎನೆಕಲ್ಲು , ಬೆಸ್ಟ್ ಬೌಲರ್ ಪಾಂಚಾಲ ವಾರಿಯರ್ಸ್ ತಂಡದ ಮೋಹನ್ ದಾಸ್ ಅಲೆಕ್ಕಾಡಿ, ಗೇಮ್ ಚೇಂಜರ್ ಆಫ್ ದಿ ಟೂರ್ನಮೆಂಟ್ ರಾಯಲ್ ಚಾಲೆಂಜರ್ಸ್ ಪಲ್ಲತ್ತಡ್ಕ ತಂಡದ ಪವನ್ ಪಲ್ಲತ್ತಡ್ಕ, ಫೈನಲ್ ಪಂದ್ಯಾಟದ ಮ್ಯಾನ್ ಆಫ್ ರಾಯಲ್ ಚಾಲೆಂಜರ್ಸ್ ಪಲ್ಲತ್ತಡ್ಕ ತಂಡದ ಚಂದ್ರಶೇಖರ ಕರಿಮಜಲು, ಬೆಸ್ಟ್ ಕೀಪರ್ ರಾಯಲ್ ಚಾಲೆಂಜರ್ಸ್ ಪಲ್ಲತ್ತಡ್ಕ ತಂಡದ ಕಿರಣ್ ಅರಂಪಾಡಿ, ಹಾಗೂ ಮ್ಯಾನ್ ಆಫ್ ದಿ ಸೀರೀಸ್ ರಾಯಲ್ ಚಾಲೆಂಜರ್ಸ್ ಪಲ್ಲತ್ತಡ್ಕ ತಂಡದ ಚಂದ್ರಶೇಖರ ಕರಿಮಜಲು ಪಡೆದರು. ಕಾರ್ತಿಕ್ ನಾಗತೀರ್ಥ ನಿರೂಪಿಸಿದರು, ಜನಾರ್ಧನ ನಾಗತೀರ್ಥ ಸ್ವಾಗತಿಸಿದರು ಪವನ್ ಪಲ್ಲತ್ತಡ್ಕ ನಾಗತೀರ್ಥ ಇವರು ವಂದಿಸಿದರು.