ಗ್ರಾಮ ಪಂಚಾಯತ್ ಅಜ್ಜಾವರ ಅರಿವು ಕೇಂದ್ರದ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ಮೇ.12ರಂದು ಉದ್ಘಾಟನೆ ಗೊಂಡಿತು.

ಬ್ಯಾಂಡ್ ಸೆಟ್ ಮೆರವಣಿಗೆಯೊಂದಿಗೆ ರಾಮಕೃಷ್ಣ ರೈ ಮೇನಾಲರವರು ಶಿಬಿರಕ್ಕೆ ಚಾಲನೆ ನೀಡಿದರು.
















ಶಿಬಿರದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದೇವಕಿ ನೆರವೇರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಜಯಮಾಲಾ ಎ. ಕೆ. ಯವರು ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. ಇನ್ನೊರ್ವ ಸಂಪನ್ಮೂಲ ವ್ಯಕ್ತಿಯಾಗಿ ಲವೀಶ್ ಕುಮಾರ್ ಕೆ ಜಿಲ್ಲಾ ವ್ಯವಸ್ಥಾಪಕರು ಶಿಕ್ಷಣ ಪೌಂಡೇಶನ್ ದಕ್ಷಿಣ ಕನ್ನಡ ಜಿಲ್ಲೆ ನಾಯಕತ್ವ ಬಗ್ಗೆ ಮಾಹಿತಿ ಹಾಗೂ ಚಟುವಟಿಕೆ ಮೂಲಕ ಮಕ್ಕಳನ್ನು ರಂಜಿಸಿದರು.

ಶಿಬಿರದಲ್ಲಿ 42 ಮಕ್ಕಳು ಭಾಗವಹಿಸಿದ್ದರು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ಲ ಎ. ಸದಸ್ಯರುಗಳಾದ ಪ್ರಸಾದ್ ಕುಮಾರ್ ರೈ ಮೇನಾಲ , ರಾಹುಲ್ ಎ, ಶ್ವೇತಾ ಕುಮಾರಿ, ಸರೋಜಿನಿ, ವಿಷ್ಣು ಯುವಕ ಮಂಡಲದ ಅಧ್ಯಕ್ಷರಾದ ರಂಜಿತ್ ರೈ, ಸಿ.ಎ ಬ್ಯಾಂಕ್ ನಿರ್ದೇಶಕರಾದ ಪ್ರಭೋದ್ ಶೆಟ್ಟಿ, ಮಾಜಿ ಪಂಚಾಯತ್ ಸದಸ್ಯರಾದ ಪುರುಷೋತ್ತಮ ಶಿರಾಜೆ, ಶೌಕತ್ ಅಲಿ ಬೇಲ್ಯ, ಸದಾನಂದ ರೈ, ಜಯಶ್ರೀ
ಆರೋಗ್ಯ ಕಾರ್ಯಕರ್ತೆ,ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಸಿಬ್ಬಂದಿಗಳಾದ ಹೇಮಾವತಿ, ಲೀಲಾವತಿ, ಲೋಕೇಶ್, ಕಾರ್ತಿಕ್,ಗ್ರಂಥಾಲಯ ಮೇಲ್ವಿಚಾರಕಿ ಲಕ್ಷ್ಮಿ, VRW ಉಮ್ಮರ್ ಬಿ.NMC BSW ವಿದ್ಯಾರ್ಥಿಗಳಾದ ಚರಿತ, ದಕ್ಷಯ್, ದಿವ್ಯ, ಹಾಗೂ ನಯನ , ಜಾನಕಿ, ರೇಣುಕಾ, ಹರೀಶ. ಎಂ , ಚಂದ್ರ ಶೇಖರ ಮೊದಲದವರು ಭಾಗವಹಿಸಿದ್ದರು. ಇಂದಿನ ಶಿಬಿರದ ಮಾಲ್ಟ್ ಬಿಸ್ಕೆಟ್ ಮತ್ತು ಭೋಜನದ ವ್ಯವಸ್ಥೆಯನ್ನು 1ನೇ ವಾರ್ಡಿನ ಸದಸ್ಯರುಗಳಾದ ಲೀಲಾ
ಮನಮೋಹನ ಮತ್ತು ರಾಹುಲ್ ಎ ಯವರು ಮಾಡಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಉಮ್ಮರ್ ಬಿ ಯವರು, ಪ್ರಾರ್ಥನೆಯನ್ನು ಶಿಬಿರಾರ್ಥಿ ಚಂದನ್ ಮುಡೂರು, ಸ್ವಾಗತವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲಾ ಎ. ಕೆ ಧನ್ಯವಾದವನ್ನು ಲಕ್ಷ್ಮಿ ಕೆ ಗ್ರಂಥಾಲಯ ಮೇಲ್ವಿಚಾರಕರು ಮಾಡಿದರು.










