ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಪಂಜದ ನೆಲ್ಲಿಕಟ್ಟೆ ಎಂಬಲ್ಲಿ ದಿಬ್ಬು – ತಿರುವು ತೆರವು ಗೊಳಿಸಿ ನೇರ ರಸ್ತೆ ನಿರ್ಮಿಸಲು ಗುದ್ದಲಿ ಪೂಜೆ ಕಾರ್ಯಕ್ರಮ ಮೇ.13 ರಂದು ನಡೆಯಿತು.















ಶಾಸಕಿ ಕು.ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿದರು.
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ, ಭಾಜಪಾ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ,ಹಿರಿಯ ವೈದ್ಯ ಡಾ.ರಾಮಯ್ಯ ಭಟ್, ಶಿವರಾಮಯ್ಯ ಕರ್ಮಾಜೆ,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ನಿರ್ದೇಶಕರಾದ ಲಿಗೋಧರ ಆಚಾರ್ಯ, ಚಿನ್ನಪ್ಪ ಗೌಡ ಚೊಟ್ಟೆಮಜಲು, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಸದಸ್ಯರಾದ ಜಗದೀಶ್ ಪುರಿಯ,ಶ್ರೀಮತಿ ವೀಣಾ ಪಂಜ, ಚಂದ್ರಶೇಖರ ದೇರಾಜೆ, ಮಾಜಿ ಸದಸ್ಯ ಲೋಕೇಶ್ ಬರೆಮೇಲು, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲು ಗುತ್ತು, ಮೋಹನ್ ದಾಸ್, ನಿವೃತ್ತ ಯೋಧ ದಾಮೋದರ ಗೌಡ ಪಲ್ಲೋಡಿ, ಕವನ್ ಪಲ್ಲೋಡಿ, ಬಾಲಕೃಷ್ಣ ಪಲ್ಲೋಡಿ , ವಿಜಯಕುಮಾರ್ ಬೇರ್ಯ, ಚೆನ್ನಕೇಶವ ಆಚಾರ್ಯ , ಖಾದರ್ ನೆಲ್ಲಿಕಟ್ಟೆ , ಅಶೋಕ್ ಪಲ್ಲೋಡಿ
ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ಶಾಸ್ತ್ರಿ ಸ್ವಾಗತಿಸಿದರು.ಲೋಕೇಶ್ ಬರೆಮೇಲು ವಂದಿಸಿದರು.










