ಕುಕ್ಕನ್ನೂರು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದಲ್ಲಿ ಮಲೆದೈವಗಳ ನೇಮೋತ್ಸವ

0

ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದಲ್ಲಿ ಶ್ರೀ ಮಲೆದೈವಗಳ ನೇಮೋತ್ಸವ ಮತ್ತು ಧೂಮಾವತಿ ದೈವದ ನೇಮ ಮೇ.14 ಮತ್ತು ಮೇ.15ರಂದು ನಡೆಯಿತು.

ಮೇ.14ರಂದು ರಾತ್ರಿ ಭಂಡಾರ ತೆಗೆಯಲಾಯಿತು. ಮೇ.15ರಂದು ಬೆಳಗ್ಗೆ 6 ಗಂಟೆಗೆ ಮಲೆ ಉಳ್ಳಾಕುಲು ನೇಮ. ನಂತರ ನಾಯರ್ ನೇಮ, ಮಧ್ಯಾಹ್ನ ಮಲೆದೈವಗಳ ನೇಮ ನಡೆದು ಪ್ರಸಾದ ವಿತರಣೆ ನಡೆಯಿತು.

ದೈವಸ್ಥಾನದ ಆಡಳಿತ ಮೊಕ್ತೇಸರರು, ಆಡಳಿತ ಸಮಿತಿಯವರು, ಸೇವಾ ಸಮಿತಿಯವರು, ಕುಕ್ಕನ್ನೂರು ಹದಿನಾರು ಒಕ್ಕಲು ಸೋಣಂಗೇರಿ ಹತ್ತು ಒಕ್ಕಲು ಹಾಗು ಊರವರು, ಪರವೂರ ಭಕ್ತರು ಇದ್ದರು.