ಬೊಲೆರೋ ಚಾಲಕನಿಗೆ ಗಾಯ,ಆಸ್ಪತ್ರೆಗೆ ದಾಖಲು
ಸಂಪಾಜೆ ಅರಣ್ಯ ಇಲಾಖೆ ಭವನದ ಬಳಿ ಪಿಕಪ್ ಹಾಗೂ ಬುಲೆರೋ ವಾಹನದ ನಡುವೆ ಇಂದು ಸಂಜೆ ಅಪಘಾತ ಸಂಭವಿಸಿ ಜೀಪು ಚಾಲಕನಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದು ಬಂದಿದೆ.















ಪಿಕಪ್ ವಾಹನ ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುತಿದ್ದು ಇದೇ ವೇಳೆ ಕಲ್ಲು ಗುಂಡಿಯಿಂದ ಹೋಗುತಿದ್ದ ಅರಣ್ಯ ಇಲಾಖೆಯ ಬೊಲೆರೋ ವಾಹನ ಟರ್ನ್ ಪಡೆಯುವಾಗ ಪರಸ್ಪರ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಿಂದ ಎರಡೂ ವಾಹನಗಳು ಜಖಂ ಗೊಂಡಿದ್ದು ಬುಲೆರೋ ವಾಹನದ ಚಾಲಕನಿಗೆ ಸೊಂಟದ ಭಾಗಕ್ಕೆ ಪೆಟ್ಟಾಗಿದ್ದು ಅವರನ್ನು ಕೆ ವಿ ಜಿ ಆಸ್ಪತ್ರೆಗೆ ಧಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.










