ಕೊಲ್ಲಮೊಗ್ರು ಚಾಳೆಪ್ಪಾಡಿಬೈಲು ಬಾಳೆಬೈಲು ಎಂಬಲ್ಲಿ ನೂತನವಾಗಿ ನಿರ್ಮಿಸಿರುವ ನಾಗನ ಕಟ್ಟೆಯಲ್ಲಿ “ಶ್ರೀ ನಾಗ ಪ್ರತಿಷ್ಠಾ” ಕಲಶವು
“ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ”ಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೇ.16 ರಂದು ನಡೆಯಿತು ನಡೆಯಿತು.
















ಮೇ.15 ರಂದು ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯವರಣೆ, ಸ್ವಸ್ತಿ। ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ಅಘೋರ ಹೋಮ, ಬಾಧಾಕರ್ಷಣೆ, ಉಚ್ಚಾಟನೆ, ವಾಸ್ತುಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬ ಜಲಾಧಿವಾಸ, ಪ್ರಾಕಾರ ದಿಕ್ಬಲಿ ನಂತರ ಪ್ರಸಾದ ವಿತರಣೆ ನಡೆಯಿತು.
ಮೇ. 16 ಬೆಳಿಗ್ಗೆ ಮಹಾಗಣಪತಿ ಹೋಮ, ಪ್ರತಿಷ್ಟಾಹೋಮ, ಆಶ್ಲೇಷಾ ಬಲಿಪೂಜೆ, ಪಂಚವಿಂಶತಿ ಕಲಶಪೂಜೆ, ದಿವಾ ಗಂಟೆ 9-20ರ ನಂತರ ಮಿಥುನ ಲಗ್ನ ಶುಭಮುಹೂರ್ತದಲ್ಲಿ “ನಾಗ ಪ್ರತಿಷ್ಠೆ”. ಪಂಚಾಮೃತ ಅಭಿಷೇಕ, ಪಂಚ ವಿಂಶತಿ ಸಾನ್ನಿಧ್ಯ ಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಶ್ರೀಮತಿ ಮತ್ತು ಧರ್ಮಪಾಲ ಗೌಡ ಬಾಳೆಬೈಲು, ಕುಟುಂಬಸ್ಥರು ,ಚಾಳೆಪ್ಪಾಡಿ ಬೈಲಸ್ಥರು, ಮೊದಲಾದವರು ಉಪಸ್ಥಿತರಿದ್ದರು.










