














ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಬಳಿ ವ್ಯಾಪಾರ ಮಾಡುತ್ತಿದ್ದ ಬಿಳಿನೆಲೆ ಗ್ರಾಮದ ಕೈಕಂಬ ನಿವಾಸಿ ಬಾಲಚಂದ್ರ ಗೌಡ (೩೮)ರವರು ಹೃದಯಾಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ.
ಈ ಹಿಂದೆ ಇವರು ಕಡಬ ಕಾಲೇಜ್ ರಸ್ತೆಯ ಬೆಸ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಗುರುಶ್ರೀ ಆಗ್ರೋ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಪ್ರಾಮಾಣಿಕತೆ ಮತ್ತು ಸ್ನೇಹಭಾವದಿಂದ ಎಲ್ಲರೊಂದಿಗೂ ಬೆರೆತು ಅಪಾರ ಸ್ನೇಹಿತ ಬಳಗ ಹೊಂದಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.










