
ಮುರುಳ್ಯ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಅವಿನಾಶ್ ದೇವರ ಮಜಲುರವರ ಅಧ್ಯಕ್ಷತೆಯಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ನಡೆಯಿತು. ಸುಳ್ಯ ಶಿಕ್ಷಣ ಇಲಾಖೆ ಸಮನ್ವಯ ಅಧಿಕಾರಿ ಶೀತಲ್ ಯು. ಕೆ. ಅವರು ಸರಕಾರಿ ಶಾಲೆಯಲ್ಲಿ ಸೌಕರ್ಯ, ಸೌಲಭ್ಯ, ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ವಿವರಿಸಿದರು, B.R.e. ಸುಂದರ್, ಅಕ್ಷರ ದಾಸೋಹ ನಿರ್ದೇಶಕಿ ವೀಣಾ ಎಂ ಟಿ, ಸುಮಂತ್, ಸಂತೋಷ್, e.R.P. ಜಯಂತ್ ಇಲಾಖೆ ಅಧಿಕಾರಿಗಳು ಪೋಷಕರ ಕುರಿತು ಮಾಹಿತಿ ನೀಡಿದರು.

ಶಾಲಾ ದತ್ತು ಸ್ವೀಕೃತರಾದ ಮಧು ಯತೀಶ್, ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಬಾಮೂಲೆ , ಉಪಾಧ್ಯಕ್ಷ ಕು. ಜಾನಕಿ ಮುರುಳ್ಯ, ಸದಸ್ಯ ಸುಂದರ ಶೇರ , ಶ್ರೀಮತಿ ಪುಷ್ಪಲತಾ ಕುಕ್ಕಟ್ಟೆ ವೇದಿಕೆಯಲ್ಲಿದ್ದರು. ಪಂಜ ಹೋಬಳಿಯ 5 ಶಾಲಾ ಎಸ್. ಡಿ. ಎಂ. ಸಿ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.
















ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಸ್ವಾಗತಿಸಿದರು. ಸಹ ಶಿಕ್ಷಕಿ ಅರ್ಪಿತಾ ಪ್ರಾರ್ಥಿಸಿದರು. ಶಾಲಾ ಜಿ ಪಿ ಟಿ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಕಾರ್ಯಕ್ರಮದಲ್ಲಿ ಪೋಷಕರು ಪ್ರೋತ್ಸಾಹದೊಂದಿಗೆ ಸಹಕರಿಸಿದರು.
ವರದಿ :- ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ.











