ಭಯೋತ್ಪಾದನೆ ವಿರುದ್ಧ ವಿದೇಶಗಳಿಗೆ ಸರ್ವಪಕ್ಷ ನಿಯೋಗ

0

ಸ್ಪೇನ್,ರಷ್ಯಾ,ಗ್ರೀಸ್ ದೇಶಗಳ ಭೇಟಿ ಪಟ್ಟಿಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟಗೆ ಅವಕಾಶ

ಪಾಕಿಸ್ತಾನದ ಭಯೋತ್ಪಾದನೆ ಪಹಲ್ಗಾಂ ಕೃತ್ಯದ ನಂತರ ಭಾರತ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಕೈಗೊಂಡ “ಆಪರೇಷನ್ ಸಿಂಧೂರ” ಕಾರ್ಯಾಚರಣೆಯ ಕುರಿತು ವಿಶ್ವದ ಪ್ರಮುಖ ರಾಷ್ಟ್ರಗಳೊಂದಿಗೆ ಭಾರತದ ಸಂದೇಶವನ್ನು ಸಾರಲು ಭಾರತ ಸರ್ಕಾರ ಸರ್ವಪಕ್ಷ ರಾಜತಾಂತ್ರಿಕ ನಿಯೋಗ ರಚಿಸಿದ್ದು 7 ತಂಡಗಳಾಗಿ ಭೇಟಿ ನೀಡಲಿದೆ. ಈ ವೇಳೆ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ರಷ್ಯಾ,ಸ್ಪೇನ್,ಗ್ರೀಸ್, ಸೋಲವೆನಿಯ,ಲ್ಯಾಟಿವ್, ರಷ್ಯಾ ದೇಶಗಳಿಗೆ ಭೇಟಿ ನೀಡಲಿದ್ದು ಈ ನಿಯೋಗದಲ್ಲಿ 8 ಜನ ಸಂಸದರು ಒಳಗೊಂಡಿದ್ದಾರೆ.