
ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ನ ಧರ್ಮಗುರುಗಳಾಗಿ, ಸೈಂಟ್ ಜೋಸೆಫ್ ಅಂಗ್ಲಮಾಧ್ಯಮ ಶಾಲೆ ಹಾಗೂ ಸೈಂಟ್ ಬ್ರಿಜಿಡ್ಸ್ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕರಾಗಿ ಕಳೆದ ಆರು ವರ್ಷಗಳಿಂದ ಸುಳ್ಯದಲ್ಲಿ ಸೇವೆ ಸಲ್ಲಿಸಿದ ರೆ.ಪಾ.ವಿಕ್ಟರ್ ಡಿಸೋಜ ರವರು ಬಂಟ್ವಾಳಕ್ಕೆ ವರ್ಗಾವಣೆಗೊಂಡು ತೆರಳುತ್ತಿರುವ ಸಂದರ್ಭದಲ್ಲಿ ಚರ್ಚ್ ಗೆ ಸಂಬಂಧಿಸಿದ ವಿವಿಧ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಬೀಳ್ಕೊಡುವ ಕಾರ್ಯಕ್ರಮ ಮೆ.18 ರಂದು ಚರ್ಚ್ ಮೆಸ್ ಸಭಾಂಗಣದಲ್ಲಿ ನಡೆಯಿತು.

ಚರ್ಚ್ ಪಾಲನ ಸಮಿತಿ ವತಿಯಿಂದ, ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ಶಿಕ್ಷಕ ವೃಂದ,ಪೊಷಕ ಸಮಿತಿ,ಕೆಥೋಲಿಕ್ ಸಭೆಯ ಅಧ್ಯಕ್ಷರು ಮತ್ತು ಪಧಾದಿಕಾರಿಗಳು, ಕೆಥೊಲಿಕ್ ಸಭಾದ ಸ್ತ್ರೀ ಸಂಘಟನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ಸಂತ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಅಧ್ಯಕ್ಷರು ಪಧಾದಿಕಾರಿಗಳು, ಭಾರತೀಯ ಕ್ಯಾಥೊಲಿಕ್ ಯುವ ಸಂಚಲನ ಸಮಿತಿ, ವೈಸಿಎಸ್ ಸಮಿತಿ, ಅಲ್ಟರ್ ಬಾಯ್ಸ್ & ಗರ್ಲ್ಸ್ ವತಿಯಿಂದ ಅಲ್ಲದೆ ಅನೇಕ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅಭಿನಂದಿಸಿ ಗೌರವಿಸಿದರು.















ವೇದಿಕೆಯಲ್ಲಿ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೋ ಸರ್ವರನ್ನೂ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಸೈಂಟ್ ಬ್ರಿಜಿಡ್ಸ್ ಶಾಲೆ ಮುಖ್ಯ ಶಿಕ್ಷಕಿ ಸಿಸ್ಟರ್ ಅಂತೋನಿ ಮೇರಿ,ಸೈಂಟ್ ಜೊಸೆಫ್ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ,ಸೈಂಟ್ ರೈಮಂಡ್ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಗ್ರೇಸಿ,ಅಶಿಶಿ ಸದನ ಕಾನ್ವೆಂಟ್ ಸುಪೀರಿಯರ್ ಶಿಶಿಲಿ,ಚರ್ಚ್ ವ್ಯಾಪ್ತಿಯ 21 ಆಯೋಗಳ ಸಂಚಾಲಕಿ ಕವಿತಾ ಮೊದಲಾದವರು ಉಪಸ್ಥಿತರಿದ್ದರು.
ಜೊಸೆಫ್ ಶಾಲೆ ಪೋಷಕರ ಪರವಾಗಿ ಪಿಟಿಎ ಉಪಾಧ್ಯಕ್ಷ ಶಶಿಧರ ಎಂ ಜೆ,ಚರ್ಚ್ ಬಾಂಧವರ ಪರವಾಗಿ ಗಾಡ್ ಪ್ರೀ ಮೊಂತೋರೊ,ಹಾಗೂ ನ.ಪಂ ಸದಸ್ಯರಾದ ಡೇವಿಡ್ ದೀರಾ ಕ್ರಾಸ್ತ ಶುಭ ಹಾರೈಸಿ ಮಾತನಾಡಿದರು.
ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ಪರವಾಗಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಮತ್ತು ವರದಿಗಾರ ಶರೀಫ್ ಜಟ್ಟಿಪಳ್ಳ ಅಬಿನಂದಿಸಿ ಶುಭಹಾರೈಸಿದರು.
ಚರ್ಚ್ ಪಾಲನ ಸಮಿತಿ ಕಾರ್ಯದರ್ಶಿ ಜೂಲಿಯಾನ ಕ್ರಾಸ್ತ ವಂದಿಸಿ ಶಿಕ್ಷಕಿ ಅನಿತಾ ಮಸ್ಕರೇನಶ್ ಕಾರ್ಯಕ್ರಮ ನಿರೂಪಿಸಿದರು.










