ವೈವಾಹಿಕ ಬದುಕಿನ ಸುವರ್ಣ ಸಂಭ್ರಮ ಆಚರಿಸಿಕೊಂಡ ಪೆರುಮುಂಡ ಪಿ.ಕೆ.ಭರತ ಮತ್ತು ಶ್ರೀಮತಿ ಸತ್ಯಭಾಮ ದಂಪತಿ

0

ಪೆರಾಜೆಯ ಪೆರುಮುಂಡ ಪಿ.ಕೆ.ಭರತ ಮತ್ತು ಸತ್ಯಭಾಮ ದಂಪತಿ ವೈವಾಹಿಕ ಬದುಕಿನ 50 ವರ್ಷದ ಸುವರ್ಣ ಸಂಭ್ರಮವನ್ನು ಮೇ.18 ರಂದು ಕೇಕ್ ಕತ್ತರಿಸುವ ಮೂಲಕ ಮನೆಯಲ್ಲಿ ಆಚರಿಸಿಕೊಂಡರು.


ಈ ಸಂದರ್ಭದಲ್ಲಿ ಪುತ್ರಿಯರಾದ ಶ್ರೀಮತಿ ವಸಂತಿ, ಶ್ರೀಮತಿ ಜಯಂತಿ,ಶ್ರೀಮತಿ ನಳಿನಿ ಅಳಿಯಂದಿರಾದ ಶಶಿಕಾಂತ ಬಾಳೆಕಜೆ ತೊಡಿಕಾನ,ಸಹದೇವ ಕೊಳಂಗಾಯ ಪೆರಾಜೆ,ಜನಾರ್ಧನ ನೆಡ್ಚಿಲು ಮತ್ತು ಮೊಮ್ಮಕ್ಕಳು ಹಾಗೂ ಪೆರುಮುಂಡ ಕುಟುಂಬಸ್ಥರು ಮತ್ತು ಬಂಧುಮಿತ್ರರು, ಶ್ರೀಮತಿ ಕೃಷ್ಣವೇಣಿ ಮತ್ತು ಎನ್.ಎಸ್.ವೆಂಕಪ್ಪ ಗೌಡ ನಾರ್ಕೋಡು ಪೆರ್ಜಿ ಮತ್ತು ಮನೆಯವರು, ಶ್ರೀಮತಿ ಜಯಲಕ್ಷ್ಮೀ ಮತ್ತು ಎನ್.ಜನಾರ್ಧನ ನಾರ್ಕೋಡು ಮತ್ತು ಮನೆಯವರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದು ಶುಭಹಾರೈಸಿದರು.