ಪೆರಾಜೆ : ಅಗ್ನಿ ಯುವಕ ಮಂಡಲದ ವತಿಯಿಂದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

0

ಪೆರಾಜೆ ಅಗ್ನಿ ಯುವಕ ಮಂಡಲ ಬಂಟೋಡಿ ಇದರ ವತಿಯಿಂದ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ, ಗ್ರಾ.ಪಂ. ಪೆರಾಜೆ, ನೆಹರು ಯುವ ಕೇಂದ್ರ ಕೊಡಗು, ಜ್ಯೋತಿ ವಿದ್ಯಾಸಂಘ ಹಾಗೂ ಪ್ರಣಮ್ ಫೌಂಡೇಷನ್ ಸಹಯೋಗದೊಂದಿಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಮೇ.11 ರಂದು ಪೆರಾಜೆ ಜ್ಯೋತಿ ಪ್ರೌಢಶಾಲೆಯಲ್ಲಿ ನಡೆಯಿತು.


ನೂರಾರು ಮಂದಿ ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಪ್ರಣಮ್ ಫೌಂಡೇಶನ್ ಆಡಳಿತ ಮಂಡಳಿಯ ಪದಾಧಿಕಾರಿಗಳು, ಜ್ಯೋತಿ ಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಅಗ್ನಿ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.