ಶ್ರೀಮತಿ ಮಿಥುನ ಜಬಳೆಯವರಿಗೆ ಸುವರ್ಣ ಕರ್ನಾಟಕ ವೀರವನಿತೆ ಸಾಧಕ ರತ್ನ ಪ್ರಶಸ್ತಿ

0

ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು, ವಿಶ್ವಕನ್ನಡ ಜಾನಪದ ಪರಿಷತ್ ಬೆಂಗಳೂರು, ಆನಂದಿ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ವಿಶ್ವ ಮಹಿಳಾ ದಿಚರಣೆ ಪ್ರಯುಕ್ತ ಸುವರ್ಣ ಕರ್ನಾಟಕ ವೀರವನಿತೆ ಸಾಧಕ ರತ್ನ ಪ್ರಶಸ್ತಿಗೆ ಐವರ್ನಾಡಿನ ಶ್ರೀಮತಿ ಮಿಥುನ ಜಬಳೆಯವರು ಆಯ್ಕೆಯಾಗಿದ್ದು ಇತ್ತೀಚೆಗೆ ಉಡುಪಿಯ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕ ವೀರವನಿತೆ ಸಾಧಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ನಾಡು,ನುಡಿ,ಸಾಹಿತ್ಯ,ಸಂಸ್ಕೃತಿ,ಶಿಕ್ಷಣ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದ ಮತ್ತು ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು.