ಕಾಯಂಬಾಡಿ’: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 10 ನೇ ಸ್ಥಾನ ಪಡೆದ ಉತ್ತಮ್ ಕಣ್ಕಲ್ ರವರಿಗೆ ಸನ್ಮಾನ

0

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನ್ವಿ ಎಂದು ರಾಜ್ಯಕ್ಕೆ 10 ನೇ ಸ್ಥಾನ ಪಡೆದ ಕಣ್ಕಲ್ ತರವಾಡು ಮನೆ ಯುವರಾಜ್ ಕಣ್ಕಲ್ ಮತ್ತು ಶ್ರೀಮತಿ ಪ್ರೇಮಾವತಿ ದಂಪತಿಗಳ ಪುತ್ರ ಉತ್ತಮ್ ಇವರನ್ನು ಸ್ವಾಮಿ ಕೊರಗಜ್ಜ ಗೆಳಯರ ಬಳಗ ಕಾಯಂಬಾಡಿ ಇದರ ವತಿಯಿಂದ ಅವರ ಮನೆಯಲ್ಲಿ ಗೌರವಿಸಲಾಯಿತು. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಅರುಣ್ ರೈ ಗೆಜ್ಜೆ ಅಭಿನಂದನಾ ಮಾತುಗಳನ್ನಾಡಿದರು. ಗೆಳೆಯರ ಬಳಗದ ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಅರುಣ್ ಆಚಾರ್ಯ ಉಪಸ್ಥಿತರಿದ್ದರು.
.