ಮೇ.21 ರಂದು ಪಂಜ ಶ್ರೀ ಕಾಚು ಕುಜುಂಬ ದೈವದ ನೂತನ ದೈವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ

0

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಗೈಬಂಟ ಕಾಚು ಕುಜುಂಬ ದೈವದ ಮೂಲಸ್ಥಾನ ಗರಡಿ ಬೈಲು ನಲ್ಲಿ ಶ್ರೀ ಕಾಚು ಕುಜುಂಬ ದೈವದ ನೂತನ ದೈವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮವು ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಹಾಗೂ ಕ್ಷೇತ್ರದ ವಾಸ್ತು ಶಿಲ್ಪಿಗಳಾದ ಪ್ರಸಾದ್ ಮುನಿಯಂಗಳ ಇವರ ನಿರ್ದೇಶದಂತೆ ಮೇ. 21 ಪೂರ್ವಹ್ನ 9 ಗಂಟೆಯ ಶುಭ ಮುಹೂರ್ತದಲ್ಲಿ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಸಲಹಾ ಸಮಿತಿ ಸದಸ್ಯರು ವಿನಂತಿಸಿದ್ದಾರೆ.